ಕಾರು-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; ಮೃತರ ಸಂಖ್ಯೆ 9ಕ್ಕೆ ಏರಿಕೆ

ಯಾದಗಿರಿ: ಖಾಸಗಿ ಬಸ್ ಹಾಗೂ ಕಾರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದ ನಡೆದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಸೇತುವೆ ಬಳಿಯ ಶಾಂತಪುರ ಕ್ರಾಸ್ ಹತ್ತಿರ ಬೀದರ್ ಬೆಂಗಳೂರು ಹೆದ್ದಾರಿಯಲ್ಲಿ ಶುಕ್ರವಾರ(17) ಬೆಳಗ್ಗೆ ಸಂಭವಿಸಿದ್ದು, ಮೃತರ ಸಂಖ್ಯೆ 6 ರಿಂದ 9ಕ್ಕೆ ಏರಿಕೆಯಾಗಿದೆ.

ಕಾರು – ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 6 ಮಂದಿ ಸಜೀವ ದಹನ

ರಾಯಚೂರು ಜಿಲ್ಲೆಯ ಸಿರವಾರ ಮೂಲದ ಕೃಷ್ಣನಾಯಕ್ ಕುಟುಂಬದ ಮೂವರು ಮಕ್ಕಳು ಸೇರಿ 10 ಸದಸ್ಯರು ತಮ್ಮ ಮನೆ ದೇವರಾದ ಸುರಪುರ ವೇಣುಗೋಪಾಲಸ್ವಾಮಿ ಅಮಾವಾಸ್ಯೆ ದರ್ಶನ ಪಡೆದು ಸಿರವಾರಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.

ಸಿರವಾರ ಮೂಲದ ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣ ನಾಯಕ್(52), ಅವರ ಪತ್ನಿ ಅನಂತಕಲಾ ಕೃಷ್ಣ ನಾಯಕ್(45), ಅಳಿಯ ಶರಣಬಸವ (36), ಪುತ್ರಿ ನಿಸರ್ಗ ಶರಣಬಸವ (30), ಮೊಮ್ಮಕ್ಕಳಾದ ಸಿದ್ಧಾರ್ಥ (3), ಅದ್ವಿಕಾ (5), ಶ್ರೀನಿಧಿ (1.5) , ಕೃಷ್ಣ ನಾಯಕ್ ಅಣ್ಣನ ಮಗಳು ಶಶಿಕಲಾ (30) ,ಇವರ ಮಕ್ಕಳಾದ ಚಂದನ್ (8) ಕಾರಿನಲ್ಲಿ ಸುಟ್ಟು ಕರಕಲಾದ ಮೃತರು.

ಶಶಿಕಲಾ ಅವರ ಇನ್ನೊಬ್ಬ ಮಗ ವಿರಾಟ್ (10) ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: Content is protected !!