27ರ ಹರೆಯದ ಯುವತಿ ನಿಗೂಢ ನಾಪತ್ತೆ

ಉಡುಪಿ: ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಬರ್ಲಾಡಿ ನಿವಾಸಿಯಾಗಿರುವ ಜಯಶ್ರೀ (27) ಎಂಬ ಯುವತಿ ಕಳೆದ ಏಪ್ರಿಲ್ 7 ರಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.


ನಾಪತ್ತೆಯಾಗಿರುವ ಯುವತಿಯು ಸುಮಾರು 5 ಅಡಿ 2 ಇಂಚು ಎತ್ತರವಿದ್ದು, ಸಪೂರ ಶರೀರ ಹಾಗೂ ಕೋಲು ಮುಖ ಹೊಂದಿದ್ದಾರೆ. ಬಿಳಿ ಮೈಬಣ್ಣದ ಇವರು ಕನ್ನಡ ಭಾಷೆ ಮಾತನಾಡುತ್ತಾರೆ. ಈ ಯುವತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ:

ಶಂಕರನಾರಾಯಣ ಪಿಎಸ್‌ಐ: 08259-280299
ಕುಂದಾಪುರ ಸಿಪಿಐ: 08254-230338
ಎಸ್‌ಡಿಪಿಓ ಕುಂದಾಪುರ: 08254-232338
ಡಿಪಿಓ ಉಡುಪಿ: 0820-2534777
ವಲಯ ನಿಯಂತ್ರಣ ಕೊಠಡಿ: 8242220501

ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕೆಂದು ಪೊಲೀಸರು ವಿನಂತಿಸಿದ್ದಾರೆ.

error: Content is protected !!