ತುಳುನಾಡಿನಲ್ಲಿ ಪ್ರಕೃತಿ, ದೈವ ದೇವರ ನಂಬಿಕೆ ಅಪಾರ: ವಿಜೇತ್ ಮಂಜನಾಡಿ

ಸುರತ್ಕಲ್ : ಕಲ್ಲು, ಮಣ್ಣು, ಮರ ಹೀಗೆ ಪ್ರಕೃತಿಯೆ ದೇವರೆಂದು ಆರಾಧನೆ ಮಾಡಲು ಜಗತ್ತಿಗೆ ತೋರಿಸಿಕೊಟ್ಟವರು ತುಳುನಾಡಿನ ಹಿರಿಯರು ಎಂದು ತುಳು ಜಾನಪದ ವಿದ್ಯಾರ್ಥಿ ವಿಜೇತ್ ಎಂ ಮಂಜನಾಡಿ ನುಡಿದರು. ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ “ಅಯೋಧ್ಯ” ಚೇಳೈರುಗುತ್ತುವಿನಲ್ಲಿ ನಡೆದ ಯುಗಾದಿ ಭಾವ ಗಾನ ಯಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.


ತುಳುನಾಡಿನಲ್ಲಿ ಪ್ರಕೃತಿ, ದೈವ, ದೇವರ ಮೇಲಿನ ನಂಬಿಕೆ ಅಪಾರ, ಇದು ಇಲ್ಲಿನ ಶಕ್ತಿ ಎಂದರು. ಯುಗಾದಿ ಎಂಬುದು ನಮ್ಮ ತುಳುವರ ವರ್ಷದ ಆರಂಭ ಹಿಂದಿನ ಕಾಲದಲ್ಲಿ ಯುಗಾದಿಯ ಬಿಸು ಹಬ್ಬವನ್ನು ವಿಶೇಷ ರೀತಿಯಲ್ಲಿ ಅಚರಿಸಲಾಗುತ್ತಿತ್ತು ಎಂದು ಹೇಳಿದರು.

ಕಾರ್ಯಕ್ರಮವನ್ನು ಹಿರಿಯ ಜಾನಪದ ವಿದ್ವಾಂಸರಾದ ಡಾ. ವೈ‌.ಎನ್ ಶೆಟ್ಟಿ ಉದ್ಘಾಟಿಸಿದರು. ವೇದಿಕೆಯಲ್ಲಿ ಅ.ಭಾ.ಸಾ.ಪ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶೈಲೇಶ್, ಜಿಲ್ಲಾ ಸಮಿತಿ ಸಂಚಾಲಕ ಸುಂದರ ಶೆಟ್ಟಿ ಇಳಂತಿಲ, ದಿವಾಕರ ಸಾಮಾನಿ ಚೇಳೈರುಗುತ್ತು ಮುಂತಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅ.ಭಾ.ಸಾ.ಪ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷೆ ವೀಣಾ ಟಿ ಶೆಟ್ಟಿ ಚೇಳೈರುಗುತ್ತು ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಲತೇಶ್ ಸ್ವಾಗತಿಸಿ ಗೀತಾ ಲಕ್ಷ್ಮೀಶ ಧನ್ಯವಾದ ಸಮರ್ಪಿಸಿದರು. ಮಂಗಳೂರು ವಿಶ್ವವಿದ್ಯಾಲಯ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!