
ಸುರತ್ಕಲ್: ಎರ್ಮಾಳು ಜಪ್ಪು, ಕಂಡೇವು ಎಂಬ ತುಳುನಾಡಿನ ನಾಣ್ಣುಡಿಯಂತೆ ತುಳುನಾಡಿನ ಕೊನೆಯ ಉತ್ಸವವಾದ ಚೇಳ್ಯಾರು ಖಂಡಿಗೆ ಧರ್ಮರಸು ಉಳ್ಳಾಯ ದ್ಯೆವಸ್ತಾನ ಕಂಡೇವುದ ಆಯನವು ಮೇ 15ರಿಂದ 16 ರವರೆಗೆ ನಡೆಯಲಿದೆ ಎಂದು ದೈವಸ್ಥಾನದ ಸಮಿತಿಯ ಅಧ್ಯಕ್ಷ ಖಂಡಿಗೆ ಬೀಡು ದಯಾನಂದ ಬಿ ಶೆಟ್ಟಿ ತಿಳಿಸಿದರು.

ಚೇಳ್ಯಾರು ಖಂಡಿಗೆ ಧರ್ಮರಸು ಉಳ್ಳಾಯ ದ್ಯೆವಸ್ತಾನದಲ್ಲಿ ನಡೆದ ಕಂಡೇವುದ ಆಯನ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 15ರಿಂದ 16 ರವರೆಗೆ ವಾರ್ಷಿಕ ಜಾತ್ರಾ ಕಾರ್ಯಕ್ರಮ ಕಂಡೇವುದ ಆಯನ ನಡೆಯಲಿದ್ದು, ಮೇ 15 ರ ಶುಕ್ರವಾರ ಬೆಳಿಗ್ಗೆ 7 ಕ್ಕೆ ಮೀನು ಹಿಡಿಯುವಿಕೆ, 9ಕ್ಕೆ ಮೂಲಸ್ಥಾನದಲ್ಲಿ ಶುದ್ಧಕಲಶ, ಗಣಹೋಮ, 11ಕ್ಕೆ ಸಂಕ್ರಮಣ ಪೂಜೆ, ಮಧ್ಯಾಹ್ನ , ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಬ್ರಹ್ಮಸ್ಥಾನದಲ್ಲಿ ಬ್ರಹ್ಮರಿಗೆ ತಂಬಿಲ, ಕುಮಾರ ಸಿರಿಗಳ ದರ್ಶನ, ಧರ್ಮರಸು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ಭಂಡಾರ ಮೂಲಸ್ಥಾನಕ್ಕೆ ಹೋಗುವುದು.

ಸಿಡಿಮದ್ದು ಪ್ರದರ್ಶನ ನಂತರ ಧ್ವಜಾರೋಹಣ, 16 ರ ಬೆಳಿಗ್ಗೆ 5 ಕ್ಕೆ ಧರ್ಮರಸು ಶ್ರೀ ಉಳ್ಳಾಯ, ಇಷ್ಟದೇವತೆ, ಬಬ್ಬರ್ಯ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಂತರ ನಂದಿಗೋಣ ಕುಮಾರ ಸಿರಿಗಳ ಭೇಟಿ, 7 ಕ್ಕೆ ನಾಗದೇವರಿಗೆ ಭಕ್ತಾದಿಗಳಿಂದ ತಂಬಿಲ ಸೇವೆ ಸಂಜೆ 4-30ಕ್ಕೆ ಬಾಕಿಮಾರು ಗದ್ದೆಯಲ್ಲಿ ಚೆಂಡು 6 ಕ್ಕೆ ಜಾರಂದಾಯ, ಬಂಟ, ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಬಾಕಿಲ್‌ದಾಂತಿ ಶ್ರೀ ಕೋರಬ್ಬು ದೈವಸ್ಥಾನದ ಕೋರ್ದಬ್ಬು ಮತ್ತು ಧೂಮಾವತಿ ದೈವದ ಭೇಟಿ, ರಾತ್ರಿ 7-30ಕ್ಕೆ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಧ್ವಜಾವರೋಹಣ, ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನ , 25 ರ ಸೋಮವಾರ ರಾತ್ರಿ ಗಂಟೆ 9 ಕ್ಕೆಕಲ್ಕುಡ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ,ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆಯೆಂದು ಅವರು ತಿಳಿಸಿದರು.

ಈ ಸಂದರ್ಭ ನಾಗರಾಜ್ ಭಟ್ ಭಟ್ರ ಚಾವಡಿ, ಆಶಿಕ್ ಭಟ್ ಭಟ್ರಚಾವಡಿ,ದ್ಯೆವಸ್ತಾನದ ಸಮಿತಿಯ ಗೌರವಾಧ್ಯಕ್ಷ ತೋಕೂರು ಗುತ್ತು ಉದಯಕುಮಾರ್ ಶೆಟ್ಟಿ, ಕಾರ್ಯದರ್ಶಿ ಚರಣ್ ಕುಮಾರ್, ಕೋಶಾಧೀಕಾರಿ ಸುಧಾಕರ ಪಿ ಶೆಟ್ಟಿ. ಕರಿಯ ಶೆಟ್ಟಿ ಮೇಗಿನ ಗುತ್ತು, ರವಿಶಂಕರ್ ರೈ ಮೇಗಿನ ಗುತ್ತು, ದಿವಾಕರ ಸಾಮಾನಿ ಚೇಳ್ಯೆರು ಗುತ್ತು, ನ್ಯಾಯವಾದಿ ರವೀಂದ್ರ ಶೆಟ್ಟಿ, ಶೇಖರ ಶೆಟ್ಟಿ ಖಂಡಿಗೆ ಮತ್ತಿತರು ಉಪಸ್ಥಿತರಿದ್ದರು.