ಲವ್​ ಜಿಹಾದ್​ ಕೇಸ್​​ಗೆ ಬಿಗ್​ ಟ್ವಿಸ್ಟ್​​​: ಆರೋಪಿಗೆ ಅಂತರಾಜ್ಯ ಲಿಂಕ್, ಯುವತಿಯಿಂದ ಪ್ರತಿದೂರು ದಾಖಲು!

ಕೊಪ್ಪಳ: ಜಿಲ್ಲೆಯಲ್ಲಿ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತ್ತಿದ್ದು, ಆರೋಪಿಗೆ ಅಂತರಾಜ್ಯದವರ ಜೊತೆ ಲಿಂಕ್ ಇರುವುದು ಪತ್ತೆಯಾಗಿದ್ದು, ಅವರಿಂದ ಆರ್ಥಿಕ ಸಹಾಯ ಪಡೆದಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ.

ಆರೋಪಿ ಮುಸ್ತಫಾ ಖಾದ್ರಿಗೆ ಅಂತರಾಜ್ಯ ಲಿಂಕ್ ಇದ್ದು, ಗೋವಾ, ಮುಂಬೈನಿಂದ ಆರ್ಥಿಕ ಸಹಾಯ ದೊರೆತಿದೆ ಎನ್ನಲಾಗಿದೆ. ಗೋವಾ ಹಾಗೂ ಮುಂಬೈನ ಇಬ್ಬರು ಮಟ್ಕಾ ಬುಕ್ಕಿಗಳ ಸಂಪರ್ಕವಿದೆ. ಕೊಪ್ಪಳದಲ್ಲಿ ಹೈಫೈ ಜೀವನ ನಡೆಸಲು ಅಂತರಾಜ್ಯಗಳ ಬುಕ್ಕಿಗಳಿಂದ ಆರ್ಥಿಕ ಸಹಾಯ ದೊರೆತಿದೆ. ಇದೇ ಹಣದಿಂದಲೇ ಮುಸ್ತಫಾ ಹುಡುಗಿಯರ ಜೊತೆ ಎಂಜಾಯ್ ಮಾಡುತ್ತಿದ್ದ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಮುಸ್ತಫಾ ಖಾದ್ರಿ ಮೊಬೈಲ್‌ನಲ್ಲಿ 9,700 ವಿಡಿಯೋಗಳು, 7,000 ಫೋಟೋಗಳು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ವಿಡಿಯೋಗಳನ್ನು ಮುಸ್ತಫಾ ಬೇರೆಯವರಿಗೆ ರವಾನಿಸಿರೋ ಸಾಧ್ಯತೆ ಇದ್ದು, ಹೀಗಾಗಿ ಮುಸ್ತಫಾ ವಿರುದ್ಧ ಐಟಿ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಈಗಾಗಲೇ ಮುಸ್ತಫಾ ಪ್ರೀತಿಸುತ್ತಿದ್ದ ಯುವತಿಯಿಂದ ಕೂಡ ಪ್ರತಿದೂರು ದಾಖಲಾಗಿದ್ದು, ಕೊಪ್ಪಳ ನಗರ ಠಾಣೆಗೆ ಆಗಮಿಸಿ ಮುಸ್ತಫಾನನ್ನ ಪ್ರೀತಿಸುತ್ತಿದ್ದ ಯುವತಿಯಿಂದ ಮೊಬೈಲ್ ಕಸಿದುಕೊಂಡ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮೆಡಿಕಲ್ ಕಾಲೇಜ್ ವಾಟರ್ ಟ್ಯಾಂಕ್ ಬಳಿ ಊಟ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ 8-10 ಜನ ಅಪರಿಚಿತ ಹುಡುಗರು ಮುಸ್ತಫಾಗೆ ಜೀವ ಬೆದರಿಕೆ ಹಾಕಿ ಆತನ ಬಳಿ ಇದ್ದ ಎರಡು ಮೊಬೈಲ್ ನೋಡಿ ಕೊಡುತ್ತೇನೆಂದು ಪಡೆದುಕೊಂಡು ವಾಪಸ್ ಕೊಟ್ಟಿಲ್ಲಾ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!