ಬ್ರಹ್ಮಕುಮಾರೀಸ್ ಮಂಗಳೂರು ವತಿಯಿಂದ “ದಾಸ ಸಂಕೀರ್ತನ ಕುಣಿತ ಭಜನೆ” ಸ್ಪರ್ಧೆ

ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ, ಮಂಗಳೂರು ವತಿಯಿಂದ “ದಾಸ ಸಂಕೀರ್ತನ ಕುಣಿತ ಭಜನೆ” ಸ್ಪರ್ಧೆಯನ್ನು ಭಾನುವಾರ(ಏ.12) ವಿಶ್ವ ಶಾಂತಿ ಮಂದಿರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಯುವ ಸಮಾಜವನ್ನು ಪ್ರೋತ್ಸಾಹಿಸುವುದರೊಂದಿಗೆ ಕುಣಿತ ಭಜನಾ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ವಿಶ್ವೇಶ್ವರಿ ಇವರು ಆಧ್ಯಾತ್ಮಿಕ ಸಂದೇಶವನ್ನು ನೀಡುತ್ತಾ, “ದಾಸ ಸಂಕೀರ್ತನೆ ಮತ್ತು ಭಜನೆಗಳು ಕೇವಲ ಸಂಗೀತವಲ್ಲ, ಅವು ಆತ್ಮಶುದ್ಧಿ ಮತ್ತು ಮನಶ್ಶಾಂತಿಯ ಸಾಧನಗಳಾಗಿವೆ. ಇಂದಿನ ವೇಗದ ಜೀವನದಲ್ಲಿ ಮಾನವನಿಗೆ ಒಳಗಿನ ಶಾಂತಿ ಅತ್ಯವಶ್ಯಕವಾಗಿದೆ. ಭಗವಂತನ ಸ್ಮರಣೆಯೊಂದಿಗೆ ಭಜನೆ ಮಾಡುವುದರಿಂದ ಮನಸ್ಸು ಏಕಾಗ್ರವಾಗುತ್ತದೆ ಹಾಗೂ ಜೀವನದಲ್ಲಿ ಸಕಾರಾತ್ಮಕತೆ ಬೆಳೆಯುತ್ತದೆ. ಯುವಜನತೆ ಈ ರೀತಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ” ಎಂದು ತಿಳಿಸಿದರು. ಭಜನೆಯ ಮೂಲಕ ಮನಶ್ಶಾಂತಿ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆ ಸಾಧ್ಯವೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಮಾಧವ ಎಂ. ಅಂಚನ್ ಅವರು ಭಾಗವಹಿಸಿ, ದಾಸ ಸಾಹಿತ್ಯದ ಮಹತ್ವ ಹಾಗೂ ಭಜನೆಯ ಆಧ್ಯಾತ್ಮಿಕ ಪ್ರಭಾವದ ಕುರಿತು ಮಾತನಾಡಿದರು. ಮತ್ತೊಬ್ಬ ಅತಿಥಿಯಾಗಿ ಶ್ರೀ ವಿಜಯ ಎನ್. ಕುಕ್ಯಾನ್ ಅವರು ಉಪಸ್ಥಿತರಿದ್ದು, ಯುವಜನತೆ ಭಜನೆಗಳ ಮೂಲಕ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ನ್ಯಾಯಾಧೀಶರಾಗಿ ಡಾ. ರತಿ, ಸಂಶೋಧಕರು, ಕನ್ನಡ ಹಂಪಿ ವಿಶ್ವವಿದ್ಯಾಲಯ ಅವರು ಸ್ಪರ್ಧಾರ್ಥಿಗಳ ಪ್ರದರ್ಶನವು ಅತ್ಯಂತ ಪ್ರಶಂಸನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ಸ್ಪರ್ಧೆಯಲ್ಲಿ ಅನೇಕ ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದವು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಸ್ಪರ್ಧೆಯಲ್ಲಿ ಶೇಷಶಾಯನ ಕುಣಿತ ಭಜನಾ ಮಂಡಳಿ, ಬೈಕಂಪಾಡಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಬ್ರಹ್ಮಶ್ರೀ ನಾರಾಯಣ ತಂಡ ಪಡೆದುಕೊಂಡಿತು.

ಬ್ರಹ್ಮ ಕುಮಾರಿ ಜಯಕ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸ್ನೇಹಕ್ಕ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಸಮಗ್ರ ಕಾರ್ಯಕ್ರಮವು ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಸೊಗಡಿನಿಂದ ಕಂಗೊಳಿಸಿತು.

error: Content is protected !!