ಇಬ್ಬರ ಜೊತೆ ಮದುವೆ, ಮತ್ತೋರ್ವಳ ಜತೆ ನಿಶ್ಚಿತಾರ್ಥ; ಕಾಮುಕನ ಕರ್ಮಕಾಂಡ ತಿಳಿದ ಕುಟುಂಬಸ್ಥರಿಂದ ಧರ್ಮದೇಟು

ಬೆಂಗಳೂರು: ಇಬ್ಬರ ಜೊತೆಗೆ ಮದುವೆಯಾಗಿ ಮತ್ತೊಬ್ಬಳ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಸಿಕ್ಕಿ ಬಿದ್ದ ಕಾಮುಕನಿಗೆ ಹುಡುಗಿಯ ಮನೆಯವರು ಹಾಗೂ ಮೊದಲ ಪತ್ನಿ ಧರ್ಮದೇಟು ನೀಡಿದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ ಆರೋಪಿ.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ⬇️

ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ರವಿಯ ಈಕ್ರತ್ಯಕ್ಕೆ ಆತನ ಇಡೀ ಕುಟುಂಬವೇ ಸಾಥ್ ಕೊಡುತ್ತಿತ್ತು ಎಂದು ತಿಳಿದು ಬಂದಿದೆ. 2024ರ ಜನವರಿಯಲ್ಲಿ ರವಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಸ್ವಲ್ಪ ದಿನಗಳ ಬಳಿಕ ಕಂಡ ಕಂಡ ಹೆಣ್ಣುಮಕ್ಕಳ ದೇಹದ ಬಗ್ಗೆ ಪತ್ನಿಯ ಜೊತೆ ವರ್ಣನೆ ಮಾಡುತ್ತಿದ್ದ. ವರದಕ್ಷಿಣೆ ತೆಗೆದುಕೊಂಡು ಬಾ, ನಿನ್ನ ಸ್ನೇಹಿತರನ್ನು ಮನೆಗೆ ಕರೆಸು ಎನ್ನುತ್ತಿದ್ದ. ಇದರಿಂದ ಮೊದಲನೇ ಪತ್ನಿ ಬೇಸತ್ತಿದ್ದಳು.

ಇನ್ನೂ ಪತ್ನಿ ಗರ್ಭಿಣಿಯಾದಾಗ ಮತ್ತೆ ಹುಡುಗಿ ನೋಡೋಕೆ ಶುರು ಮಾಡಿದ್ದ. ತನಗೆ ಮದುವೆಯಾಗಿಲ್ಲ ಅಂತ ಹೇಳಿಕೊಂಡು ತನ್ನ ಕುಟುಂಬದವರ ಜೊತೆ ಊರೂರು ಸುತ್ತುತ್ತಿದ್ದ. 2025ರ ಡಿಸೆಂಬರ್‌ನಲ್ಲಿ ಮೊದಲ ಪತ್ನಿ ಹೆರಿಗೆಗೆ ಹೋದಾಗ, ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಮತ್ತೋರ್ವ ಯುವತಿಯನ್ನು ಮದುವೆಯಾಗಿದ್ದ. ಎರಡನೇ ಮದುವೆ ವಿಚಾರ ತಿಳಿದು ಮೊದಲ ಪತ್ನಿ ಹಾಗೂ ಕುಟುಂಬಸ್ಥರು ರವಿ ಮನೆಗೆ ಹೋಗಿ ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಮತ್ತೋರ್ವ ಯುವತಿಯ ಜೊತೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದ. ಈ ವಿಚಾರ ಮೊದಲ ಪತ್ನಿಗೆ ತಿಳಿದಿತ್ತು. ಬಳಿಕ ಎಂಗೇಜ್ಮೆಂಟ್ ಆದ ಹುಡುಗಿ ಕುಟುಂಬಕ್ಕೆ ವಿಚಾರ ತಿಳಿಸಿದ್ದರು. ಆಗ ಹುಡುಗಿ ಮನೆಯವರು ರವಿ ಮನೆಗೆ ಬಂದು ಧರ್ಮದೇಟು ನೀಡಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ರವಿ ವಂಚನೆ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ರವಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

error: Content is protected !!