ಯುವಕನ ಅಪಹರಿಸಿ ಮಂಗಳಮುಖಿ ವೇಷ ಹಾಕಿಸಿ ಹಣ ಕಲೆಕ್ಷನ್; ಮಂಗಳೂರಿನ ಅನಿತಾ ಆಂಡ್‌ ಟೀಂ ವಿರುದ್ಧ ಗಂಭೀರ ಆರೋಪ

ಮೈಸೂರು: ಯುವಕನೋರ್ವನನ್ನು ಅಪಹರಿಸಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ ಸೆಕ್ಸ್ ವರ್ಕ್, ರೀಲ್ಸ್ ಗಳಲ್ಲಿ ಬಳಸಿರುವುದಾಗಿ ಆರೋಪಿಸಿ ಮೈಸೂರಿನ ಲಷ್ಕರ್ ಠಾಣೆಗೆ ನೊಂದ ಯುವಕ ದೂರು ನೀಡಿದ್ದಾರೆ.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ⬇️

ಮೈಸೂರು ಜಿಲ್ಲೆಯ ನಂಜನಗೂಡಿನ ತ್ಯಾಗರಾಜ ಕಾಲೋನಿಯ ಯುವಕ ಅನಿಲ್ ಕುಮಾರ್ ಅಲಿಯಾಸ್ ಅಕ್ಷತಾ ಎಂಬುವವರೇ ನೊಂದ ಯುವಕ.

4 ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಮಂಗಳಮುಖಿ ಅನಿತಾ ಮತ್ತು ತಂಡ ಅನಿಲ್ ಕುಮಾರ್‌ಗೆ ಪರಿಚಯವಾಗಿದೆ. ಈ ವೇಳೆ ಅನಿಲ್ ಕುಮಾರ್‌ಗೆ ಮುಸುಕು ಹಾಕಿ ಬಲವಂತವಾಗಿ ಕಿಡ್ನಾಪ್ ಮಾಡಿ ಮಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಬಲವಂತವಾಗಿ ಸೀರೆ, ನೈಟಿ, ಕಿವಿಗೆ ಓಲೆ, ಮೂಗಿಗೆ ಬೊಟ್ಟು ಹಾಕಿ ಮಂಗಳಮುಖಿಯಂತೆ ವೇಷ ಹಾಕಿಸಿ ಬಲವಂತವಾಗಿ ಬೀದಿಗಳಲ್ಲಿ ಅಂಗಡಿಗಳ ಮುಂದೆ ಕಲೆಕ್ಷನ್ ಮಾಡಿಸಿದ್ದಾರೆ. ಪ್ರತಿದಿನ 2 ರಿಂದ 3 ಸಾವಿರ ಕಲೆಕ್ಷನ್ ಮಾಡಿಸಿ ರೀಲ್ಸ್‌ ತಯಾರಿಸಿ ಸಾಮಾಜಿಕ ಜಾಲತಾಣದಲ್ಲೂ ಅಪ್‌ಲೋಡ್‌ ಮಾಡಿದ್ದಾರೆ. ಈ ದಂಧೆಯಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿ ಹಣ ಗಳಿಸಿ ಬಲವಂತವಾಗಿ ಲಿಂಗ ಬದಲಾವಣೆಗೆ ಹುನ್ನಾರ ನಡೆಸಿದ್ದರು. ಆದ್ರೆ ನಾನು ಇದರಿಂದ ಬೇಸತ್ತು ಆರೋಪಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಸಂತ್ರಸ್ತ ಹೇಳಿಕೊಂಡಿದ್ದಾನೆ.

ಅಲ್ಲದೇ ಮಂಗಳೂರು, ಕೇರಳ ಭಾಗಗಳಿಗೆ ಕಳಿಸಿ ಸೆಕ್ಸ್ ವರ್ಕ್‌ಗೆ ಬಳಕೆ ಮಾಡಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಟ್ರಾನ್ಸ್‌ಜೆಂಟರ್‌ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಸಹ ಅಧಿಕೃತ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಬಾಂಬೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಮಂಗಳಮುಖಿಯಾಗಿ ಕನ್ವರ್ಟ್ ಮಾಡಲು ಸ್ಕೆಚ್ ಹಾಕಿದ್ರು. ಈ ವಿಚಾರ ತಿಳಿದು ನಾನು ಆ ಕರಾಳ ದಂಧೆಯ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿ ತನ್ನ ಸಂಪಾದನೆಯ 3 ಲಕ್ಷ ಕೊಡುವಂತೆ ಕೇಳಿದಾಗ ಮಂಗಳಮುಖಿ ಅನಿತಾ ಉಲ್ಟಾ ಹೊಡೆದಿದ್ದಾರೆ ಎಂದು ಅನಿಲ್ ಕುಮಾರ್ ಆರೋಪಿಸಿದ್ದಾರೆ .

ಹಣ ಕೇಳಿದ್ದಕ್ಕೆ ಅನಿತಾ, ತನ್ನ ಮನೆಯಿಂದ 5 ಲಕ್ಷ ನಗದು ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಸುಳ್ಳು ಕಂಪ್ಲೆಂಟ್ ದಾಖಲಿಸಿ ಜೈಲಿಗೆ ಹಾಕಿಸುತ್ತೇನೆಂದು ಅನಿತಾ ಬೆದರಿಕೆ ಹಾಕಿದ್ದಾರೆ. ಮನನೊಂದ ಅನಿಲ್ ಕುಮಾರ್ ದಾಖಲೆಗಳು ಸರ್ಟಿಫಿಕೇಟ್ ಸಮೇತ ಮಂಗಳೂರು ತೊರೆದು ನಂಜನಗೂಡು ಸೇರಿಕೊಂಡಿದ್ದೇನೆ. ಮತ್ತೆ ದಂಧೆ ಮಾಡಿಸಲು ಹವಣಿಸಿದ ಅನಿತಾ ಮಂಗಳಮುಖಿಯರನ್ನು ಅನಿಲ್ ಕುಮಾರ್ ಮನೆಗೆ ಕಳಿಸಿ ಗಲಾಟೆ ಮಾಡಿಸಿದ್ದಾರೆ. ಆಗಾಗ್ಗೆ ಅನಿತಾ ತನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ದಂಧೆಗೆ ಹಿಂದಿರುಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

error: Content is protected !!