ಹೆಬ್ರಿ: ಇಂದಿರಾನಗರದಲ್ಲಿ ನೀರಿನ ಟ್ಯಾಂಕಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಶೇಖರ ನಾಯ್ಕ್ (57) ಮೃತ ವ್ಯಕ್ತಿ.
ಮಂಗಳವಾರ ತಮ್ಮ ಮನೆಯ ಮೇಲಿನ ನೀರಿನ ಟ್ಯಾಂಕ್‌ನಲ್ಲಿ ನೀರು ಇರುವುದನ್ನು ಪರಿಶೀಲಿಸಲು ಹೋದಾಗ, ಅವರ ಮೊಬೈಲ್ ಫೋನ್ ಟ್ಯಾಂಕ್ ಒಳಗೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ಬಾಗಿ ನೋಡಿದ ವೇಳೆ ಅವರು ನಿಯಂತ್ರಣ ತಪ್ಪಿ ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದಾರೆ.

ನೀರಿನಲ್ಲಿ ಮುಳುಗಿ ಮೇಲಕ್ಕೆ ಬರಲಾಗದೆ ಅವರನ್ನು ಮೇಲಕ್ಕೆತ್ತಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರೀಕ್ಷಿಸಿ ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
