ಬಾಳಿಲ: ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ ವಾರ್ಷಿಕ ಸಭೆ ಹಾಗೂ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ

ಸುಳ್ಯ: ಮಹರ್ಷಿ ವಾಲ್ಮೀಕಿ ವಸತಿ ಶಾಲೆ, ಬಾಳಿಲ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಇದರ ವಾರ್ಷಿಕ ಸಭೆಯು ಮಾರ್ಚ್ 7ರಂದು ಶಾಲಾ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಸುಮಾರು 60 ವರ್ಷಗಳಿಂದ ಈ ಶಾಲೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ವಸತಿ ಸೌಲಭ್ಯವನ್ನು ಒದಗಿಸುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದು, ಸುಳ್ಯ ತಾಲೂಕಿನಲ್ಲಿ ಉತ್ತಮ ಹೆಸರು ಮತ್ತು ಗೌರವವನ್ನು ಗಳಿಸಿದೆ.
ಸಭೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಲಕ್ಷ್ಮಣ್ ಗೌಡ ಕಲ್ಕಳ, ಉಪಾಧ್ಯಕ್ಷೆಯನ್ನಾಗಿ ತುಳಸಿ ಶೇಖರ್ ಎಣ್ಮೂರು ಅವರನ್ನು ಆಯ್ಕೆ ಮಾಡಲಾಯಿತು.
ಇದರೊಂದಿಗೆ 13 ಸದಸ್ಯರನ್ನು ಒಳಗೊಂಡ ಎಸ್‌ಡಿಎಂಸಿ ಸಮಿತಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಸಿ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ಶುಭವನ್ನು ಹಾರೈಸಿದರು. ಸಭೆಯಲ್ಲಿ ಶಾಲಾ ವಸತಿ ನಿಲಯದ ಮೇಲ್ವಿಚಾರಕ ವಿಶ್ವನಾಥ್, ಮಾಜಿ ಪದಾಧಿಕಾರಿಗಳು, ಪೋಷಕರು, ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

error: Content is protected !!