
ಮಂಗಳೂರು: ಕರಾವಳಿ ಕರ್ನಾಟಕದ ಕೈಗಾರಿಕಾ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಲಿರುವ ಬೀವಿಂಗ್ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ಮುಖ್ಯ ಅತಿಥಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ. ಭರತ್ ಶೆಟ್ಟಿಯವರು NITK ಯ STEPನಲ್ಲಿರುವ ಕಟ್ಟಡದಲ್ಲಿ ದೀಪ ಬೆಳಗುವುದರೊಂದಿಗೆ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾಕ್ಟರ್ ವೈ.ಭರತ್ ಶೆಟ್ಟಿ ಅವರು ನನ್ನ ಕ್ಷೇತ್ರದಲ್ಲಿ ದೇಶದ ರಕ್ಷಣೆಗೆ ಒತ್ತು ಕೊಡುವಂತಹ ಸಂಸ್ಥೆಯು ಆರಂಭವಾಗಿರುವುದು ನನ್ನ ಕ್ಷೇತ್ರಕ್ಕೆ ಹಾಗೂ ನಮಗೆ ಹೆಮ್ಮೆ ತರುವಂತಹುದು. ಭವಿಷ್ಯದ ದೃಷ್ಟಿಯಿಂದ ಇಂತಹ ಸಂಸ್ಥೆಗಳ ಕೊಡುಗೆ ಅಗತ್ಯ ಎಂದು ಶುಭ ಹಾರೈಸಿದರು.

ಬಿವಿಂಗ್ ಆರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕೃಷಿ, ಕೈಗಾರಿಕೆ ,ಭದ್ರತೆ, ಸರ್ವೆ, ವಿಪತ್ತು ನಿರ್ವಹಣೆ ಹಾಗೂ ಉತ್ತಮ ಗುಣಮಟ್ಟದ ಹಾಗೂ ಅತ್ಯಾಧುನಿಕ ದ್ರೋಣ್ ಉತ್ಪನ್ನ ಹಾಗೂ ಸೇವೆಯ ಗುರಿಯನ್ನು ಹೊಂದಿದ್ದು, ನುರಿತ ಸಶಕ್ತ ಹಾಗೂ ಪಳಗಿದ ತಂಡವನ್ನು ಹೊಂದಿದೆ. ದೇಶದ ಭದ್ರತೆ ಹಾಗೂ ರಕ್ಷಣೆಯೇ ನಮ್ಮ ಮೊದಲ ಆದ್ಯತೆ ಎಂದು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಶ್ರೀ ಸುನಿಲ್ ಎಲ್ ಪ್ರಭುರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾದ ಶ್ರೀ ಸುಭಾಷ್.ಸಿ. ಎರಗಲ್ , Deputy Director NITK ಮತ್ತು ಶ್ರೀ ಸುಬ್ರಾಯ ಹೆಗ್ಡೆ, Director Incharge STEP, NITK ರವರು ತಂತ್ರಜ್ಞಾನ ಹಾಗೂ ಕೌಶಲ್ಯತೆಯನ್ನು ದೇಶದ ರಕ್ಷಣೆಗೆ ಬಳಸಲಿರುವ ತಂಡದ ಸದಸ್ಯರಿಗೆ ಶುಭ ಹಾರೈಸಿ ಸಂಸ್ಥೆಯು ಯಶಸ್ಸು ಕಾಣಲಿ ಎಂದು ಹರಸಿದರು.
ಉಪಸ್ಥಿತರಿದ್ದ ನಿಕಟ ಪೂರ್ವ ಮನಪಾ ಸದಸ್ಯರಾದ ಶ್ರೀಮತಿ ಶೋಭಾ ರಾಜೇಶ್ , ಶ್ರೀ ಲೋಕೇಶ್ ಬೊಳ್ಳಾಜೆ , ಇನ್ನೋರ್ವ ಮನಪಾ ಸದಸ್ಯೆ ಹಾಗೂ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಕುಮಾರಿ ಶ್ವೇತಾ ಪೂಜಾರಿ ಅವರು ಕೂಡ ಸಂಸ್ಥೆಗೆ ಶುಭ ಹಾರೈಸಿದರು.
