ಮಂಗಳೂರು: ಇರಾನ್‌ನಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ 48 ಗಂಟೆಗಳ ಕಾಲ ಅತ್ಯಂತ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಇದೀಗ ಇರಾನ್‌ನಲ್ಲಿರುವ ಭಾರತೀಯರು ತಾವು ಇರುವ ಸ್ಥಳದಲ್ಲೇ ಮುಂದಿನ ಮುಂದಿನ 48 ಗಂಟೆಗಳ ಕಾಲ “ಅವರು ಎಲ್ಲಿದ್ದೀರೋ ಅಲ್ಲೇ ಇರಿ” ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳುವ ಸಲಹೆ ನೀಡಿದೆ. ಜನರು ಮನೆಯೊಳಗೆ ಇರಬೇಕು ಮತ್ತು ಎಲ್ಲಾ ವಿದ್ಯುತ್ ಮತ್ತು ಮಿಲಿಟರಿ ನೆಲೆಗಳಿಂದ ದೂರವಿರಬೇಕು. ಬಹುಮಹಡಿ ಕಟ್ಟಡಗಳ ಮೇಲಿನ ಅಂತಸ್ತಿನಲ್ಲಿ ವಾಸಿಸುವವರು ಕೆಳಗಿನ ಮಹಡಿಗಳಿಗೆ ಸ್ಥಳಾಂತರಗೊಳ್ಳಲು ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ರಸ್ತೆಗಳಲ್ಲಿ ಅನಿವಾರ್ಯವಾಗಿ ಸಂಚರಿಸಬೇಕಾದ ಸಂದರ್ಭ ಎದುರಾದಲ್ಲಿ, ಕಡ್ಡಾಯವಾಗಿ ರಾಯಭಾರ ಕಚೇರಿಯ ಅನುಮತಿ ಪಡೆಯಬೇಕು ಮತ್ತು ರಾಯಭಾರ ಕಚೇರಿಯ ನಿರಂತರ ಸಂಪರ್ಕದಲ್ಲಿರಬೇಕು. ರಾಯಭಾರ ಕಚೇರಿಯ ವತಿಯಿಂದ ವ್ಯವಸ್ಥೆ ಮಾಡಲಾಗಿರುವ ಹೋಟೆಲ್‌ಗಳಲ್ಲಿ ತಂಗಿರುವ ಭಾರತೀಯರು ಹೊರಗೆ ಬರಬಾರದು ಹಾಗೂ ಅಲ್ಲಿ ನಿಯೋಜನೆಗೊಂಡಿರುವ ರಾಯಭಾರ ಕಚೇರಿಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.

ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

ಮೊಬೈಲ್ ಸಂಖ್ಯೆಗಳು: +989128109115, +989128109102, +989128109109, +989932179359 ಇಮೇಲ್: cons.tehran@mea.gov.in ಭಾರತೀಯರು ಅಧಿಕೃತ ಮಾಹಿತಿಗಾಗಿ ರಾಯಭಾರ ಕಚೇರಿಯ ಜಾಲತಾಣಗಳನ್ನು ಗಮನಿಸುತ್ತಿರಬೇಕೆಂದು ಭಾರತದ ರಾಯಭಾರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.