ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಜಿಮ್ ಟ್ರೇನರ್ ಅರೆಸ್ಟ್!!

ಧಾರವಾಡ: ಯುವತಿಯರು, ಮಹಿಳೆಯರಿಗೆ ಬ್ಯಾಡ್ ಟಚ್ ಮಾಡುತ್ತಿದ್ದ ಜಿಮ್ ಟ್ರೇನರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಧಾರವಾಡ ನಗರದ ಮರಾಠಾ ಕಾಲೋನಿಯ “ಫಿಟನೆಸ್ ಫಸ್ಟ್” ಎಂಬ ಜಿಮ್‌ನಲ್ಲಿದ್ದ ಜಿಮ್ ಟ್ರೇನರ್ ಸಾಬೀರ್ ಬಂಧಿತ ಆರೋಪಿ.

ಜಿಮ್‌ಗೆ ಬರುವ ಯುವತಿ ಮತ್ತು ಮಹಿಳೆಯರಿಗೆ ಬ್ಯಾಡ್ ಟಚ್ ಮಾಡುತ್ತಾ ಟ್ರೇನ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಭಜರಂಗ ದಳದ ಕಾರ್ಯಕರ್ತರು ಸೇರಿಕೊಂಡು ಜಿಮ್‌ಗೆ ಬೀಗ ಹಾಕಿದ್ದರು.

ಸದ್ಯ ಆರೋಪಿ ಸಾಬೀರ್‌ನನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

error: Content is protected !!