ವಂದೇ ಭಾರತ್ ರೈಲಿನಲ್ಲಿ ಸಿಗೋ ಆಹಾರದಲ್ಲಿ ಸತ್ತ ಮಿಡತೆ: 10 ಲಕ್ಷ ರೂ. ದಂಡ

ಮುಂಬೈ: ಅಹಮದಾಬಾದ್-ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ಊಟದಲ್ಲಿ ಸತ್ತ ಮಿಡತೆ ಪತ್ತೆಯಾಗಿದ್ದು, ಈ ಹಿನ್ನಲೆ ಐಆರ್‌ಸಿಟಿಸಿ ಸಂಬಂಧಪಟ್ಟ ಕ್ಯಾಟರಿಂಗ್ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಕಳೆದ ಮಾರ್ಚ್ 15 ರಂದು ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 21896) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಿತೇಶ್ ಸಿಂಗ್ ಎಂಬ ಪ್ರಯಾಣಿಕರಿಗೆ ನೀಡಲಾದ ಆಹಾರದಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ಪ್ರಯಾಣಿಕರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅದರಲ್ಲಿ ‘ಅಹಮದಾಬಾದ್-ಮುಂಬೈ ವಂದೇ ಭಾರತ್ ರೈಲಿನಲ್ಲಿ ನೀಡಲಾದ ಆಹಾರದಲ್ಲಿ ಹುಳ ಪತ್ತೆಯಾಗಿದೆ. ಇದು ಕೇವಲ ನನಗೆ ನೀಡಿದ ಆಹಾರದಲ್ಲಿ ಮಾತ್ರವಲ್ಲ ನನ್ನ ಕೋಚ್‌ನಲ್ಲಿ ಇಂತಹ ಕನಿಷ್ಠ ಎರಡು ಪ್ರಕರಣಗಳು ವರದಿಯಾಗಿವೆ. ಇದನ್ನು ನೋಡಿದ ನಂತರ ಸಹಪ್ರಯಾಣಿಕರೆಲ್ಲರೂ ಊಟ ಮಾಡುವುದನ್ನು ನಿಲ್ಲಿಸಿದರು,” ಎಂದು ಆದಿತ್ಯ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ವಂದೇ ಭಾರತ್‌ ರೈಲಿನ ಆಹಾರದಲ್ಲಿ ಮಿಡತೆ ಫ್ರೀ…!         ವೀಡಿಯೋಗಾಗಿ  ಇಲ್ಲಿ ಕ್ಲಿಕ್‌ ಮಾಡಿ

ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಐಆರ್‌ಸಿಟಿಸಿ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದು ಅದರಂತೆ ಆಹಾರ ಪೂರೈಕೆದಾರರಿಗೆ 10 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಿದ್ದು ಜೊತೆಗೆ ಸಂಬಂಧಪಟ್ಟ ಏಜೆನ್ಸಿಯ ಗುತ್ತಿಗೆ ರದ್ದುಪಡಿಸಲು ನೋಟಿಸ್ ಜಾರಿಗೊಳಿಸಲಾಗಿದೆ.

ಹುಳು ಪತ್ತೆಯಾದ ಆಹಾರ ತಯಾರಾದ ಅಡುಗೆ ಮನೆಯನ್ನು ಸೀಲ್ ಮಾಡಲಾಗಿದ್ದು, ಸಂಪೂರ್ಣವಾಗಿ ಕೀಟನಾಶಕ ಸಿಂಪಡಣೆ ಮತ್ತು ಸ್ವಚ್ಛತಾ ಕಾರ್ಯ ನಡೆಸಲು ಆದೇಶಿಸಲಾಗಿದೆ.

error: Content is protected !!