ಬೈಕ್‌ಗೆ ಒಮಿನಿ ಕಾರು ಡಿಕ್ಕಿ; ಸಹಸವಾರನಿಗೆ ಗಾಯ

ಬಂಟ್ವಾಳ: ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಸಹಸವಾರ ಗಾಯಗೊಂಡ ಘಟನೆ ಬಿ.ಸಿ.ರೋಡ್ ಸಮೀಪದ ಮೆಲ್ಕಾರ್‌ನಲ್ಲಿ ಸಂಭವಿಸಿದೆ.

ಪ್ರಥಮ್ ಗಾಯಾಳು ಸಹಸವಾರ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ವೈಶಾಕ್ ಹಾಗೂ ಪ್ರಥಮ್ ಅವರು ದ್ವಿಚಕ್ರ ವಾಹನದಲ್ಲಿ ಮೆಲ್ಕಾರ್ ನಿಂದ ಮುಡಿಪು ಕಡೆಗೆ ಹೋಗುತ್ತಿದ್ದಾಗ ಮೆಲ್ಕಾರ್ ಜಂಕ್ಷನ್ ಬಳಿ ಸಜೀಪ ಕಡೆಯಿಂದ ಬಂದ ಒಮಿನಿ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಪ್ರಥಮ್ ಅವರು ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈಶಾಕ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದು, ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!