
ತೀರ್ಥಹಳ್ಳಿ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ i 10 ಕಾರೊಂದು ಡಿಕ್ಕಿ ಹೊಡೆದು ಚಾಲಕ ನಿಲ್ಲಿಸದೆ ಹೋಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ ಆಗುಂಬೆ ಮಾರ್ಗದ ಕೌರಿಹಕ್ಲು ಬಳಿ ಸೋಮವಾರ(ಎ.6) ರಾತ್ರಿ ನಡೆದಿದೆ.
ದಯಾನಂದ ಪ್ರಭು(60) ಮೃತ ವ್ಯಕ್ತಿ.

ಅಪಘಾತ ಎಸಗಿದ ಕಾರು ಸೊರಬ ಮೂಲದ್ದಾಗಿದ್ದು, ಡಿಕ್ಕಿಯಾದ ತಕ್ಷಣ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ.

ಆಗುಂಬೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಬೆನ್ನಲ್ಲೇ ತೀವ್ರ ತನಿಖೆ ನಡೆಸಿ ಕಾರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
