ಹಾರ್ಮುಜ್‌ ತೆರೆಯದಿದ್ದರೆ ನರಕ ತೋರಿಸ್ತೀನಿ ಎಂದ ಟ್ರಂಪ್‌ಗೆ “ಕೀ ಕಳೆದುಹೋಗಿದೆ” ಎಂದು ಇರಾನ್ ಲೇವಡಿ

ಟೆಹ್ರಾನ್/ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಾಸ್ಯ ಮತ್ತು ವ್ಯಂಗ್ಯಕ್ಕೆ ವೇದಿಕೆಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ಕೂಡಲೇ ತೆರೆಯದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಟ್ರಂಪ್ ಅವರ ಖಡಕ್ ಎಚ್ಚರಿಕೆಗೆ ಇರಾನ್ ಅತ್ಯಂತ ವಿಭಿನ್ನವಾಗಿ ತಿರುಗೇಟು ನೀಡಿದೆ.

“ನಾವು ಕೀ ಕಳೆದುಕೊಂಡಿದ್ದೇವೆ!”
ಅಮೆರಿಕಾ ಅಧ್ಯಕ್ಷರು ಮಂಗಳವಾರದ ಗಡುವು ನೀಡಿ ಗುಡುಗುತ್ತಿದ್ದಂತೆಯೇ, ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರ ಕಚೇರಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಒಂದು ಸಾಲಿನ ಪೋಸ್ಟ್ ಹಾಕಿದೆ. “ಕ್ಷಮಿಸಿ, ನಾವು ಕೀಗಳನ್ನು ಕಳೆದುಕೊಂಡಿದ್ದೇವೆ” (We’ve lost the keys) ಎಂದು ಬರೆಯುವ ಮೂಲಕ ಟ್ರಂಪ್ ಅವರ ʻಗೇಟ್ ಓಪನ್ ಮಾಡಿ’ ಎನ್ನುವ ಆದೇಶವನ್ನು ಸಾರಾಸಗಟಾಗಿ ಲೇವಡಿ ಮಾಡಿದೆ. ಅಂದರೆ, “ನೀವು ಎಷ್ಟೇ ಬೆದರಿಕೆ ಹಾಕಿದರೂ ಜಲಸಂಧಿ ತೆರೆಯಲು ನಮ್ಮ ಬಳಿ ಕೀ ಇಲ್ಲ, ನಾವು ತೆರೆಯುವುದೂ ಇಲ್ಲ” ಎನ್ನುವ ಅರ್ಥದಲ್ಲಿ ಈ ಟ್ರೋಲ್ ಮಾಡಲಾಗಿದೆ.

ಜಾಗತಿಕ ಮಟ್ಟದಲ್ಲಿ ವೈರಲ್
ಇರಾನ್ ರಾಯಭಾರ ಕಚೇರಿಯ ಈ ಒಂದು ಸಾಲಿನ ಪೋಸ್ಟ್ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಟ್ರಂಪ್ ಅವರು ಅತ್ಯಂತ ಗಂಭೀರವಾಗಿ “ಇರಾನ್‌ನಲ್ಲಿ ಮಂಗಳವಾರ ಪವರ್ ಪ್ಲಾಂಟ್ ಡೇ ಮತ್ತು ಬ್ರಿಡ್ಜ್ ಡೇ ಆಗಲಿದೆ” (ವಿದ್ಯುತ್ ಸ್ಥಾವರ ಹಾಗೂ ಸೇತುವೆಗಳನ್ನು ಧ್ವಂಸ ಮಾಡುತ್ತೇವೆ) ಎಂದು ಎಚ್ಚರಿಸಿದ್ದರು. ಆದರೆ ಇದಕ್ಕೆ ಇರಾನ್ ಯುದ್ಧದ ಭಾಷೆಯ ಬದಲಾಗಿ ಹಾಸ್ಯ ಬಳಸಿದ್ದು ಅಮೆರಿಕಾವನ್ನು ಕೆಣಕಿದಂತಾಗಿದೆ.

error: Content is protected !!