ಬೈಕ್‌ಗೆ ಬೊಲೇರೊ ಡಿಕ್ಕಿ: ಕರ್ತವ್ಯನಿರತ ಇಬ್ಬರು ಗಸ್ತು ವನಪಾಲಕರು ಸಾ*ವು

ವಿಜಯನಗರ: ಬೈಕ್‌ಗೆ ಬೊಲೇರೊ ವಾಹನ ಡಿಕ್ಕಿ ಹೊಡೆದು ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಇಬ್ಬರು ಗಸ್ತು ವನಪಾಲಕರು ಮೃತಪಟ್ಟಿರುವ ಘಟನೆ ವೆಂಕಟಾಪುರ ಗ್ರಾಮದ ಬಳಿ ಭಾನುವಾರ(ಎ.05) ರಾತ್ರಿ ನಡೆದಿದೆ.

ಕಮಲಾಪುರದ ಕೃಷ್ಣ (26) ಮತ್ತು ವೆಂಕಟಾಪುರದ (50) ಮೃತರು.

ಕೃಷ್ಣ ಹಾಗೂ ಹನುಮಂತಪ್ಪ ಇಬ್ಬರೂ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ಗಸ್ತು ವನಪಾಲಕರಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದಾಗ ಸರಕು ಸಾಗಿಸುತ್ತಿದ್ದ ಬೊಲೇರೊ ವಾಹನ ಬೈಕ್‌ಗೆ ಡಿಕ್ಕಿ ಹೊಡೆದುದರಿಂದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣವಾದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!