ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 9 ಮಂದಿ ದಾರುಣ ಸಾ*ವು!

ನಾಸಿಕ್: ಜಿಲ್ಲೆಯಲ್ಲಿ ಕಾರೊಂದು ಬಾವಿಗೆ ಬಿದ್ದು ಆರು ಮಂದಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 9 ಮಂದಿ ಮೃತಪಟ್ಟ ಘಟನೆ ದಿಂಡೋರಿ ಪಟ್ಟಣದ ಶಿವಾಜಿ ನಗರ ಪ್ರದೇಶದಲ್ಲಿ ಶುಕ್ರವಾರ(ಏ.03) ರಾತ್ರಿ 10 ಗಂಟೆಗೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತರು ಆ ಪ್ರದೇಶದ ಸಭಾಂಗಣದಲ್ಲಿ ನಡೆದ ಔತಣಕೂಟದದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಅವರ ಕಾರು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ ಎನ್ನಲಾಗಿದೆ.

ಸುನಿಲ್ ದತ್ತು ದರ್ಗುಡೆ (32), ಅವರ ಪತ್ನಿ ರೇಷ್ಮಾ, ಆಶಾ ಅನಿಲ್ ದರ್ಗುಡೆ (32), ಮತ್ತು ಅದೇ ಕುಟುಂಬದ 7-14 ವರ್ಷ ವಯಸ್ಸಿನ ಐದು ಮಂದಿ ಹೆಣ್ಣು ಮಕ್ಕಳು ಹಾಗೂ 11 ವರ್ಷದ ಓರ್ವ ಬಾಲಕ ಮೃತ ದುರ್ದೈವಿಗಳು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಮೃತದೇಹಗಳನ್ನು ದಿಂಡೋರಿಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

error: Content is protected !!