ಏ.9: ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ; ಎಸ್ಎಸ್ಎಲ್ಸಿ, ಪಿಯುಸಿ, ಪದವೀಧರರಿಗೆ ಅವಕಾಶ

ಮಂಗಳೂರು: ಎಕ್ಸ್‌ಫರ್ಟ್ ಕಾಲೇಜು ಮಂಗಳೂರು, ಕಲ್ಚರಲ್ ಹೈವೇ ಮಂಗಳೂರು ಹಾಗೂ ಕೆಎನ್‌ಎನ್‌ಡಿ ಅಸೋಸಿಯೇಟ್ಸ್ ಪ್ರೈ.ಲಿ. ಮಂಗಳೂರು ಖಾಸಗಿ ಕಂಪೆನಿಗಳ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಸರ್ವಿಸ್ ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್, ಸರ್ವೀಸ್ ಇಂಜಿನಿಯರ್, ಸರ್ವೀಸ್ ಟೆಕ್ನಿಶಿಯನ್, ಸಿಸ್ಟಮ್ ಆಪರೇಟರ್, ಫುಡ್ ಕುಕ್, ಹೆವಿ ವೆಹಿಕಲ್ ಡ್ರೈವರ್, ಮೆಕ್ಯಾನಿಕಲ್ ಟೆಕ್ನಿಶಿಯನ್, ಸೇಲ್ಸ್ ಮಾರ್ಕೆಟಿಂಗ್, ವೇರ್ ಹೌಸ್ ಅಸೋಸಿಯೇಟ್ಸ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್, ಸೀನಿಯರ್ ವೇರ್ ಹೌಸ್ ಅಸೋಸಿ ಯೇಟ್ಸ್, ಆಫೀಸ್ ಎಕ್ಸಿಕ್ಯೂಟಿವ್, ಹಾಸ್ಟೆಲ್ ವಾರ್ಡನ್, ಸ್ಟಡಿ ಇನ್ವಿಜಿಲೇಟರ್ ಹುದ್ದೆಗಳಿಗೆ ಉದ್ಯೋಗದ ಅವಕಾಶ ಲಭ್ಯವಿದೆ.

ಹಾಗಾಗಿ ಎ.9ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಗರದ ಪಡೀಲ್ ಪ್ರಜಾ ಸೌಧದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. ಎಸೆಸ್ಸೆಲ್ಸಿ, ಪಿಯುಸಿ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿ ಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!