ಪಾಕಿಸ್ತಾನಿ ರಾಜಕಾರಣಿಗೆ ನಡುಕ ಹುಟ್ಟಿಸಿದ ‘ಧುರಂಧರ್ 2’! ದಾವೂದ್ ಇಬ್ರಾಹಿಂ ಸಾವಿನ ಸೀಕ್ರೆಟ್ ಬಿಚ್ಚಿಟ್ಟ ನಬಿಲ್ ಗಬೋಲ್!

ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ 1390 ಕೋಟಿ ಲೂಟಿ ಮಾಡಿರೋ ‘ಧುರಂಧರ್ 2’ ಸಿನಿಮಾ ಈಗ ಕೇವಲ ಬೆಳ್ಳಿ ಪರದೆಗೆ ಸೀಮಿತವಾಗಿಲ್ಲ. ಇದು ಗಡಿ ದಾಟಿ ಪಾಕಿಸ್ತಾನದ ರಾಜಕೀಯ ಗಲ್ಲಿಗಳಲ್ಲೂ ಸಂಚಲನ ಮೂಡಿಸಿದೆ! ಸಿನಿಮಾದಲ್ಲಿ ರಾಕೇಶ್ ಬೇಡಿ ನಿರ್ವಹಿಸಿರುವ ‘ಜಮೀಲ್ ಜಮಾಲಿ’ ಎಂಬ ಚಾಣಾಕ್ಷ ರಾಜಕಾರಣಿಯ ಪಾತ್ರ ಈಗ ಪಾಕಿಸ್ತಾನದ ಮಾಜಿ ಸಚಿವ ನಬಿಲ್ ಗಬೋಲ್ ನಿದ್ದೆಗೆಡಿಸಿದೆ. ಆ ಪಾತ್ರ ನನಗೇ ಹೋಲಿಕೆಯಾಗುತ್ತಿದೆ ಎಂದು ಸ್ವತಃ ಗಬೋಲ್ ಅವರೇ ಬಾಯಿಬಿಟ್ಟಿದ್ದಾರೆ!

ಸಿನಿಮಾದಲ್ಲಿ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಕರಾಚಿಯ ಕ್ಲಿಫ್ಟನ್ ಏರಿಯಾದಲ್ಲಿ ಮೃತ್ಯುವಿನೊಡನೆ ಹೋರಾಡುತ್ತಿರುವಂತೆ ತೋರಿಸಲಾಗಿದೆ. ಈ ಬಗ್ಗೆ ಪಾಕಿಸ್ತಾನಿ ಮಾಧ್ಯಮಗಳು ನಬಿಲ್ ಗಬೋಲ್ ಅವರನ್ನು ಕೆಣಕಿದಾಗ ಅವರು ಕೊಟ್ಟ ಉತ್ತರ ಅತೀ ವಿಚಿತ್ರವಾಗಿತ್ತು. “ನೋಡಿ, ಮೀಡಿಯಾದಲ್ಲಿ ಮತ್ತು ಧುರಂಧರ್ ಸಿನಿಮಾದಲ್ಲಿ ದಾವೂದ್ ಕ್ಲಿಫ್ಟನ್ ಏರಿಯಾದಲ್ಲಿ ಇದ್ದಾನೆ ಅಂತ ತೋರಿಸಿದ್ದಾರೆ. ಅದೇ ಕ್ಲಿಫ್ಟನ್ ಏರಿಯಾ ನನ್ನ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದೆ! ಆದರೆ ನನಗೆ ಗೊತ್ತಿಲ್ಲ ಅವನು ಅಲ್ಲಿ ಇದ್ದಾನೋ ಇಲ್ಲವೋ..” ಎಂದು ಪಲಾಯನವಾದದ ಉತ್ತರ ನೀಡಿದ್ದಾರೆ.

ದಾವೂದ್‌ಗೆ ಇಂಜೆಕ್ಷನ್ ಕೊಟ್ಟ ಜಮೀಲ್ ಜಮಾಲಿ!
ಸಿನಿಮಾದಲ್ಲಿ ಜಮೀಲ್ ಜಮಾಲಿ ಎಂಬ ಪಾತ್ರ ದಾವೂದ್‌ಗೆ ಇಂಜೆಕ್ಷನ್ ಕೊಟ್ಟು ಸಾಯಿಸುವ ದೃಶ್ಯವಿದೆ. “ಸಿನಿಮಾದಲ್ಲಿ ಅವನು ಸಾವು-ಬದುಕಿನ ನಡುವೆ ಇದ್ದಾನೆ ಅಂತ ತೋರಿಸಿದ್ದಾರೆ, ಆದರೆ ನಿಜವಾಗಿಯೂ ಅವನು ಬದುಕಿದ್ದಾನಾ ಅಥವಾ ಸತ್ತಿದ್ದಾನಾ ಎಂಬುದು ನನಗೆ ಗೊತ್ತಿಲ್ಲ” ಎಂದು ಗಬೋಲ್ ಹೇಳಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ‘ಜಮೀಲ್ ಜಮಾಲಿ’ ಪಾತ್ರಕ್ಕೂ ನಬಿಲ್ ಗಬೋಲ್‌ಗೂ ಇರುವ ಆಶ್ಚರ್ಯಕರ ಹೋಲಿಕೆಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ.

ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಸತ್ಯ ಘಟನೆಗಳಿಂದ ಪ್ರೇರಿತವಾಗಿದೆಯೇ ಎಂಬ ಪ್ರಶ್ನೆಗೆ ಈಗ ಈ ಪಾಕಿಸ್ತಾನಿ ರಾಜಕಾರಣಿಯ ಹೇಳಿಕೆ ಪುಷ್ಟಿ ನೀಡುತ್ತಿದೆ. ರಣವೀರ್ ಸಿಂಗ್ ಅವರ ಆವೇಶಭರಿತ ನಟನೆಯ ನಡುವೆಯೂ ರಾಕೇಶ್ ಬೇಡಿ ಅವರ ‘ಜಮೀಲ್’ ಪಾತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ದಾವೂದ್ ವಿಷಯ ಬಂದಾಗ ಪಾಕಿಸ್ತಾನದ ರಾಜಕಾರಣಿಗಳು ಅದೆಷ್ಟು ಬೆವರುತ್ತಾರೆ ಎಂಬುದು ಗಬೋಲ್ ಅವರ ಮಾತಿನಲ್ಲೇ ಸಾಬೀತಾಗಿದೆ.

ಇತ್ತ ಭಾರತದಲ್ಲಿ ‘ಧುರಂಧರ್ 2’ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡುತ್ತಿದೆ. ಭಾರತವೊಂದರಲ್ಲೇ 870 ಕೋಟಿ ನೆಟ್ ಕಲೆಕ್ಷನ್ ಮಾಡಿರುವ ಈ ಸಿನಿಮಾ, ಜಾಗತಿಕವಾಗಿ 1390 ಕೋಟಿ ದಾಟಿದೆ. ಇಂತಹ ಸಿನಿಮಾಗಳು ಬರಿ ಹಣ ಮಾಡಲ್ಲ, ಇತಿಹಾಸದ ಸಮಾಧಿಯಲ್ಲಿ ಹೂತು ಹೋದ ಕರಾಳ ಸತ್ಯಗಳನ್ನು ಕೂಡ ಹೊರಹಾಕುತ್ತವೆ ಎಂಬುದಕ್ಕೆ ಪಾಕಿಸ್ತಾನದಿಂದ ಕೇಳಿಬಂದಿರುವ ಈ ಪ್ರತಿಕ್ರಿಯೆಯೇ ಸಾಕ್ಷಿ!

error: Content is protected !!