ಮಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ರಿಟೇಲ್ ಜಾಲವಾದ ‘ಮೈಜಿ’ (myG), ಮಂಗಳೂರಿನ ಫಲ್ನೀರ್‌ನಲ್ಲಿ ತನ್ನ ಅತ್ಯಾಧುನಿಕ ʻಮೈಜಿ ಫ್ಯೂಚರ್’ ಶೋರೂಂ ಅನ್ನು ಉದ್ಘಾಟಿಸುವ ಮೂಲಕ ಅಧಿಕೃತವಾಗಿ ಕರ್ನಾಟಕ ಮಾರುಕಟ್ಟೆಗೆ ಪ್ರವೇಶಿಸಿದೆ. ಸುಮಾರು 25,000 ಚದರ ಅಡಿ ವಿಸ್ತೀರ್ಣದ ಈ ಬೃಹತ್ ಮಳಿಗೆಯು ಗ್ರಾಹಕರಿಗೆ ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ನೀಡಲು ಸಜ್ಜಾಗಿದೆ.

ರಿಷಬ್ ಶೆಟ್ಟಿಯಿಂದ ಅದ್ಧೂರಿ ಉದ್ಘಾಟನೆ:
ಪ್ಯಾನ್ ಇಂಡಿಯಾ ತಾರೆ, ಖ್ಯಾತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ನೂತನ ಶೋರೂಂ ಅನ್ನು ಉದ್ಘಾಟಿಸಿಸಿ, ಸಂಸ್ಥೆಯು ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮೈಜಿ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾದ ಎ.ಕೆ. ಶಾಜಿ ಮಾತನಾಡಿ, ಮೈಜಿ ಫ್ಯೂಚರ್ ಮೂಲಕ ಕರ್ನಾಟಕಕ್ಕೆ ನಮ್ಮ ಸೇವೆಯನ್ನು ವಿಸ್ತರಿಸಲು ಮಂಗಳೂರು ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ಕೇವಲ ವ್ಯಾಪಾರವಲ್ಲದೆ, ಆಧುನಿಕ ತಂತ್ರಜ್ಞಾನವನ್ನು ಸಾಮಾನ್ಯ ಗ್ರಾಹಕರಿಗೂ ಸುಲಭವಾಗಿ ತಲುಪಿಸುವುದು ಮತ್ತು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುವುದು ನಮ್ಮ ಪ್ರಮುಖ ಆಶಯವಾಗಿದೆ. ನಂಬಿಕೆ ಮತ್ತು ಸೇವಾ ಬದ್ಧತೆಯೇ ಮೈಜಿಯ ಯಶಸ್ಸಿನ ಮೂಲಮಂತ್ರ ಎಂದರು.

ಮೈಜಿ ಸಂಸ್ಥೆಯು ವ್ಯಾಪಾರ ವಿಸ್ತರಣೆಯ ಜೊತೆಗೆ ಸ್ಥಳೀಯ ಅಭಿವೃದ್ಧಿಗೂ ಒತ್ತು ನೀಡಿದೆ. ಈ ನೂತನ ಶೋರೂಂ ಮೂಲಕ ಮಂಗಳೂರಿನ ನೂರಾರು ಯುವಕ-ಯುವತಿಯರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ದೊರೆಯಲಿವೆ. ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಿ, ಚಿಲ್ಲರೆ ಮಾರಾಟ ವಲಯದಲ್ಲಿ ವೃತ್ತಿಪರತೆಯನ್ನು ಬೆಳೆಸುವುದು ಮೈಜಿಯ ಪ್ರಮುಖ ಗುರಿಯಾಗಿದೆ ಎಂದು ಶಾಜಿ ವಿವರಿಸಿದರು.

ಈ ಸಂದರ್ಭದಲ್ಲಿ ಹಲವಾರು ಗಣ್ಯರು ನೂರಾರು ಮಂದಿ ಗ್ರಾಹಕರು ಅಭಿಮಾನಿಗಳು ಭಾಗವಹಿಸಿದ್ದರು.
ಒಂದೇ ಸೂರಿನಡಿ ನವೀನ ತಂತ್ರಜ್ಞಾನ:
ಮಂಗಳೂರಿನ ಈ ಮೈಜಿ ಫ್ಯೂಚರ್ ಮಳಿಗೆಯು ಕೇವಲ ಮಾರಾಟ ಕೇಂದ್ರವಾಗಿರದೆ, ತಂತ್ರಜ್ಞಾನದ ಹೊಸ ಆವಿಷ್ಕಾರಗಳ ತಾಣವಾಗಿದೆ. ಇಲ್ಲಿ ಗ್ರಾಹಕರಿಗೆ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಪರಿಣಿತ ಸಿಬ್ಬಂದಿ ಹಾಗೂ ಮಾರಾಟದ ನಂತರದ ಅತ್ಯುತ್ತಮ ಸೇವೆ (Service) ನೀಡುವುದು ಮೈಜಿಯ ವಿಶೇಷತೆಯಾಗಿದೆ. ಸುಮಾರು 25,000 ಚದರ ಅಡಿ ವಿಸ್ತೀರ್ಣದ ಈ ಮಳಿಗೆಯಲ್ಲಿ ಸ್ಮಾರ್ಟ್ ಫೋನ್‌ಗಳು, ಟಿವಿಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಲೇಟೆಸ್ಟ್ ಡಿಜಿಟಲ್ ಸಾಧನಗಳು ಒಂದೇ ಸೂರಿನಡಿ ಲಭ್ಯವಿವೆ. ಗ್ರಾಹಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ನೇರ ಅನುಭವ ನೀಡುವ ಜೊತೆಗೆ, ಪರಿಣಿತ ಸಿಬ್ಬಂದಿಯ ಮಾರ್ಗದರ್ಶನ ಮತ್ತು ವಿಶ್ವಾಸಾರ್ಹ ಮಾರಾಟ-ನಂತರದ ಸೇವೆಯು ಮೈಜಿ ಫ್ಯೂಚರ್‌ನ ವಿಶೇಷತೆಯಾಗಿದೆ.
ಭಾರತದಾದ್ಯಂತ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಮೈಜಿಯ ಜಾಲವು ಈಗಾಗಲೇ 150ಕ್ಕೂ ಹೆಚ್ಚು (150+) ಶೋರೂಮ್‌ಗಳನ್ನು ಹೊಂದಿದೆ.
