ಕ್ಲಾಸ್‌ ರೂಮಲ್ಲೇ ಚಾಕೊಲೇಟ್ ಕೊಟ್ಟು ಪ್ರಪೋಸ್‌ ಮಾಡಿದ ಪ್ರೊಫೆಸರ್; ಚಪ್ಪಲಿ ಏಟು ಕೊಟ್ಟ ವಿದ್ಯಾರ್ಥಿನಿ!!

ನೆಲಮಂಗಲ: ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ ಕ್ಲಾಸ್‌ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪ್ರೋಸ್‌ ಮಾಡಿದ ಘಟನೆ ನೆಲಮಂಗಲ ತಾಲೂಕಿನ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್‌ ಅಬ್ದುಲ್‌ ಪ್ರಪೋಸ್‌ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿ, ಬಳಿಕ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾರೆ.

ಅಲ್ಲದೇ ಪ್ರೊಫೆಸರ್‌ ಅಬ್ದುಲ್‌ ವರ್ತನೆಯಿಂದ ರೊಚ್ಚಿಗೆದ್ದ ಇತರ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ಅಟ್ಟಾಡಿಸಿ ಹೊಡೆದಿದ್ದಾರೆ. ಕಾರಿನ ಬಳಿ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದರಿಂದ ಭಯಭೀತನಾಗಿ ಅಬ್ದುಲ್‌ ವಿದ್ಯಾರ್ಥಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!