ವಿದ್ಯುತ್ ಕಂಬಕ್ಕೇ ಬೈಕ್ ಢಿಕ್ಕಿ; ಮೀಟರ ರೀಡರ್‌ ದಾರುಣ ಅಂತ್ಯ

ಸುಳ್ಯ: ವಿದಿನವಿಡೀ ಮನೆಮನೆಗೆ ತೆರಳಿ ವಿದ್ಯುತ್ ಬಿಲ್ ನೀಡುತ್ತಿದ್ದ ಆ ಜೀವ, ಅದೇ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿಯಾಗಿ ಕೊನೆಯುಸಿರೆಳೆದಿದೆ. ಸುಳ್ಯ ತಾಲೂಕಿನ ನಿಂತಿಕಲ್ಲು ಸಮೀಪ ನಡೆದ ಈ ಭೀಕರ ಅಪಘಾತ ಇಡೀ ಮೆಸ್ಕಾಂ ವಲಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಲೋಕನಾಥ (35) ಅವರೇ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿ.

ಬುಧವಾರ ಸಂಜೆ ಸುಳ್ಯದಲ್ಲಿ ತನ್ನ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ನಿಂತಿಕಲ್ಲು ಸಮೀಪ ಈ ಘಟನೆ ಸಂಭವಿಸಿದೆ. ಹಗಲಿಡೀ ಜನರ ಸೇವೆ ಮಾಡಿ ಮನೆಗೆ ಹೊರಟಿದ್ದ ಯುವಕನಿಗೆ ದಾರಿ ಮಧ್ಯೆಯೇ ಸಾವು ಹೊಂಚು ಹಾಕಿ ಕುಳಿತಿತ್ತು!

ಲೋಕನಾಥ ಅವರು ಚಲಾಯಿಸುತ್ತಿದ್ದ ಬೈಕ್ ದಿಢೀರನೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಜೋರಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸ ಎಷ್ಟಿತ್ತೆಂದರೆ ಲೋಕನಾಥ ಅವರು ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

error: Content is protected !!