ತುಳುನಾಡಿನ ಆಹಾರ ಪದ್ಧತಿ ಶ್ರೇಷ್ಟ -ಅಮೂಲ್ಯ ಶೆಟ್ಟಿ

ಮೂಲ್ಕಿ: ಆಟಿ ತಿಂಗಳಲ್ಲಿ ಹಿಂದಿನ ಜೀವನ ಶೈಲಿಯ ನೆನಪನ್ನು ಮಾಡಿಕೊಂಡು, ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಹೇಳಿ ಕೊಡುವ ಅನಿವಾರ್ಯತೆ ಇದೆ, ಇಂದು ಮಹಿಳೆಯರು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದೃಢವಾಗಿ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಜಗತ್ತಿಗೆ ಶ್ರೇಷ್ಠತೆಯನ್ನು ಸಾರಿದ ತುಳುನಾಡಿನ ಆಹಾರ ಪದ್ಧತಿಗಳ ಬಗ್ಗೆ ವಿಶೇಷ ಮಾಹಿತಿ ಪಡೆದುಕೊಳ್ಳುವ ಜವಬ್ದಾರಿ ಮಹಿಳೆಯರದ್ದಾಗಿದೆ ಎಂದು ಕಿನ್ನಿಗೋಳಿ ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಅಮೂಲ್ಯ ಶೆಟ್ಟಿ ಕಟೀಲು ಹೇಳಿದರು.

ಅವರು ಮೂಲ್ಕಿ ಬಳಿಯ ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಅಕ್ಷಯ ಮಹಿಳಾ ಮಂಡಳಿಯ ಸಂಯೋಜನೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಸಹಕಾರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಆಟಿ ತಿಂಗಳ ಮಾಹಿತಿ ನೀಡಿದರು.
ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಪಿ.ಆರ್.ರಾಜೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂದಿರದ ಪ್ರಧಾನ ಅರ್ಚಕ ರಾಘವೇಂದ್ರ ರಾವ್ ಕೆರೆಕಾಡು ಮಾತನಡಿದರು.
ಸಾಮಾಜಿಕ ಧಾರ್ಮಿಕ ಕ್ಷೇತ್ರ ಹಾಗೂ ಕೈಮಗ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾಧವ ಶೆಟ್ಟಿಗಾರ್ ಹಾಗೂ ದಮಯಂತಿ ದಂಪತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ತ್ರಿವೇಣಿ ಕೆರೆಕಾಡು ಅವರನ್ನು ಸನ್ಮಾನಿಸಲಾಯಿತು.
ಅಕ್ಷಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಲಿತಾ ಭಾಸ್ಕರ ಶೆಟ್ಟಿಗಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಚೇತನ್ ಶೆಟ್ಟಿಗಾರ್ ಪುನರೂರು ಸ್ವಾಗತಿಸಿದರು. ನವ್ಯಾ ಶೆಟ್ಟಿಗಾರ್ ಕೆರೆಕಾಡು ವಂದಿಸಿದರು. ಉಷಾ ನರೇಂದ್ರ ಕೆರೆಕಾಡು ನಿರೂಪಿಸಿದರು. ಸುಮಾರು ೩೫ ಪಾರಂಪರಿಕ ಆಹಾರ ಖಾದ್ಯಗಳಿಂದ ಊಟೋಪಚಾರ ನಡೆಸಲಾಯಿತು. ಸ್ಥಳೀಯ ಪ್ರತಿಭೆಗಳಿಂದ ತುಳು ಜಾನಪದ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.

error: Content is protected !!