ಭಾರತದ ನೆಲದಲ್ಲಿ ಅಮೆರಿಕದ ‘ವಾರ್ ಏಜೆಂಟ್’ ಅರೆಸ್ಟ್!‌ ಎನ್‌ಐಎ ಬಲೆಯಲ್ಲಿ ಬಿದ್ದ ʻಮಿಸ್ಟರಿಯಸ್ ಮ್ಯಾನ್‌ʼ ಯಾರು?

ನವದೆಹಲಿ: ಭಾರತದ ಆಂತರಿಕ ಭದ್ರತೆಗೆ ಈಗ ಹೊಸ ಕಂಟಕ ಎದುರಾಗಿದೆ! ಅತ್ತ ಅಮೆರಿಕವು ಶಾಂತಿ ಮತ್ತು ಸಂಧಾನದ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ಅಮೆರಿಕದ ಪ್ರಜೆಯೊಬ್ಬ ಭಾರತದ ನೆಲವನ್ನು ಬಳಸಿಕೊಂಡು ನಿಷೇಧಿತ ಸಂಘಟನೆಗಳಿಗೆ ತರಬೇತಿ ನೀಡುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈಗ ಅಮೆರಿಕದ ಮಾಜಿ ಸೈನಿಕ, ಭದ್ರತಾ ವಿಶ್ಲೇಷಕ ಎನ್ನಲಾದ ಮ್ಯಾಥ್ಯೂ ವ್ಯಾನ್‌ಡೈಕ್ (Matthew VanDyke) ಎಂಬ ʻಮಿಸ್ಟರಿಯಸ್’ ಮ್ಯಾನ್‌ ಅನ್ನು ಬಂಧಿಸಿದ್ದು, ಆತನ ಬಳಿ ಇದ್ದ ಸ್ಫೋಟಕ ಮಾಹಿತಿಗಳನ್ನು ಹೊರಗೆಳೆಯುತ್ತಿದೆ.

ಯಾರು ಈ ಮ್ಯಾಥ್ಯೂ ವ್ಯಾನ್‌ಡೈಕ್? ಸಂಚು ಏನು?
ಈ ವ್ಯಾನ್‌ಡೈಕ್ ಕೇವಲ ಸಾಕ್ಷ್ಯಚಿತ್ರ ನಿರ್ಮಾಪಕನಲ್ಲ, ಬದಲಾಗಿ ಇವನೊಬ್ಬ ನುರಿತ ʻಮರ್ಸನರಿ’ (ಬಾಡಿಗೆ ಸೈನಿಕ)! ಭಾರತದ ಈಶಾನ್ಯ ರಾಜ್ಯಗಳ ಮೂಲಕ ಅಕ್ರಮವಾಗಿ ಮ್ಯಾನ್ಮಾರ್ ಪ್ರವೇಶಿಸಿ, ಅಲ್ಲಿನ ಸಶಸ್ತ್ರ ಗುಂಪುಗಳಿಗೆ ಮತ್ತು ಭಾರತದ ಕೆಲವು ನಿಷೇಧಿತ ಸಂಘಟನೆಗಳಿಗೆ ಸ್ಪೆಷಲ್ ಫೋರ್ಸ್ ಮಾದರಿಯ ತರಬೇತಿ ನೀಡುತ್ತಿದ್ದ ಆರೋಪ ಈತನ ಮೇಲಿದೆ. ಗೆರಿಲ್ಲಾ ಯುದ್ಧ ತಂತ್ರ, ಡ್ರೋನ್ ಬಳಕೆ ಮತ್ತು ಆಧುನಿಕ ಯುದ್ಧೋಪಕರಣಗಳ ಬಳಕೆಯಲ್ಲಿ ಈತ ಎತ್ತಿದ ಕೈ!

ತನಿಖೆಯಲ್ಲಿ ಬಯಲಾದ 3 ಭೀಕರ ಥಿಯರಿಗಳು!
ವ್ಯಾನ್‌ಡೈಕ್ ಬಂಧನವು ಕೇವಲ ಅಕ್ರಮ ನುಸುಳುವಿಕೆ ಅಲ್ಲ, ಇದರ ಹಿಂದೆ ಜಾಗತಿಕ ರಾಜಕೀಯದ ದೊಡ್ಡ ಸಂಚು ಅಡಗಿದೆ ಎಂದು ಶಂಕಿಸಲಾಗಿದೆ. ಭಾರತವನ್ನು ಅಸ್ಥಿರಗೊಳಿಸಲು ಸಿಐಎ (CIA) ನಂತಹ ಸಂಸ್ಥೆಗಳು ನಡೆಸುತ್ತಿರುವ ಗುಪ್ತ ಕಾರ್ಯಾಚರಣೆಯ ಭಾಗವೇ ಇದು? ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ವಿದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವ ಬಗ್ಗೆ ಮಾತನಾಡಿದ್ದರು. ಉಕ್ರೇನ್ ಜೊತೆ ನಂಟು ಹೊಂದಿರುವ ನೆಟ್‌ವರ್ಕ್ ಭಾರತದಲ್ಲಿ ಸಕ್ರಿಯವಾಗಿದೆಯೇ? ಉಕ್ರೇನ್ ಯುದ್ಧದ ನಡುವೆಯೂ ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಈ ಸಂಚು ರೂಪಿಸಲಾಗಿದೆಯೇ?

ಇರಾನ್ ಟು ಮ್ಯಾನ್ಮಾರ್: ಜಾಗತಿಕ ಮಟ್ಟದ ಏಜೆಂಟ್!
ವ್ಯಾನ್‌ಡೈಕ್‌ನ ಹಳೆಯ ಇತಿಹಾಸವನ್ನು ಕೆದಕಿದಾಗ ಆತ ಲಿಬಿಯಾ ನಾಗರಿಕ ಯುದ್ಧದಲ್ಲಿ ಭಾಗಿಯಾಗಿದ್ದ, ಐಸಿಸ್ (ISIS) ವಿರುದ್ಧ ಹೋರಾಡುವವರಿಗೆ ತರಬೇತಿ ನೀಡಲು ʻಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್’ ಎಂಬ ಸಂಸ್ಥೆಯನ್ನೇ ಕಟ್ಟಿದ್ದ ಎಂಬುದು ತಿಳಿದುಬಂದಿದೆ. ಈಗ ಭಾರತದ ಈಶಾನ್ಯ ಭಾಗದಲ್ಲಿ ಈತ ಕಾಣಿಸಿಕೊಂಡಿರುವುದು ದೇಶದ ಭದ್ರತೆಗೆ ಎದ್ದಿರುವ ದೊಡ್ಡ ಎಚ್ಚರಿಕೆಯ ಗಂಟೆ!

ಅಮೆರಿಕ ರಾಯಭಾರ ಕಚೇರಿ ಈ ಬಗ್ಗೆ ಮೌನ ವಹಿಸಿದೆ. ಆದರೆ, ಎನ್‌ಐಎ ಮಾತ್ರ ಬಿಗಿ ತನಿಖೆ ನಡೆಸುತ್ತಿದೆ. ನಮ್ಮ ದೇಶದ ನೆಲದಲ್ಲಿ ಕುಳಿತು ನಮ್ಮ ವಿರುದ್ಧವೇ ಡ್ರೋನ್ ಯುದ್ಧದ ತಂತ್ರ ಹೂಡುತ್ತಿದ್ದ ಈ ವಿದೇಶಿ ಏಜೆಂಟ್‌ನ ಅಸಲಿ ಮಾಲೀಕರು ಯಾರು? ಇದು ಕೇವಲ ಆರಂಭವೋ ಅಥವಾ ಮಹಾ ಸಂಚಿನ ಒಂದು ಭಾಗವೋ? ಕಾದು ನೋಡಬೇಕು!

error: Content is protected !!