ಅಕ್ರಮ ಸ್ಪಿರಿಟ್ ಸಾಗಾಟ; ಇಬ್ಬರ ಬಂಧನ

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 1200 ಲೀಟರ್ ಸ್ಪಿರಿಟ್ ಸಹಿತ ಇಬ್ಬರನ್ನು ಕಾಸರಗೋಡಿನ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ಕುಂಜತ್ತೂರಿನ ಗಿರೀಶ್ (39) ತೃಶ್ಯೂರಿನ ಎ. ಎಚ್ ಅನ್ಸಿಫ್ (40) ಬಂಧಿತ ಆರೋಪಿಗಳು.

ಇಂದು(ಮಾ.23) ಮುಂಜಾನೆ ಒಂದು ಗಂಟೆ ಸುಮಾರಿಗೆ ನೀಲೇಶ್ವರದ ಮಾರ್ಕೆಟ್ ಜಂಕ್ಷನ್ ಬಳಿ ನಿಲೇಶ್ವರ ಎಸ್.ಐ.ಜಿ.ವಿಷ್ಣು ನೇತೃತ್ವದಲ್ಲಿ ವಾಹನ ತಪಾಸಿಸಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ.

34 ಕ್ಯಾನ್ ಗಳಲ್ಲಿ 1200 ಲೀಟರ್ ಸ್ಪಿರಿಟ್ ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ಮೂರು ಕಾರುಗಳಲ್ಲಿ ಸ್ಪಿರಿಟ್ ಸಾಗಿಸಲಾಗುತ್ತಿತ್ತು. ಪೊಲೀಸರನ್ನು ಕಂಡು ಎರಡೂ ಕಾರುಗಳು ತಪ್ಪಿಸಿ ಪರಾರಿಯಾಗಿದ್ದು, ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!