ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಮಗು ಪವಾಡಸದೃಶ ಪಾರು!

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ಕೌಟುಂಬಿಕ ಕಲಹವು ಒಂದು ತುಂಬು ಸಂಸಾರವನ್ನು ಬಲಿಪಡೆದಿದೆ. ಕ್ಷಣಿಕ ಆವೇಶಕ್ಕೆ ಒಳಗಾದ ದಂಪತಿ, ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿ ಸಾಯಿಸಲು ಯತ್ನಿಸಿ, ಬಳಿಕ ತಾವೂ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಸೋಮವಾರ ಜರುಗಿದೆ.

ಹೊಸಕೋಟೆ ಗ್ರಾಮದ ದರ್ಶನ್ ಹಾಗೂ ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ಮನೆಯಲ್ಲಿ ಜಗಳವಾಡಿಕೊಂಡಿದ್ದಲ್ಲದೆ, ತಾವು ಸಾಯುವ ಮುನ್ನ ಮಗುವನ್ನೂ ಮುಗಿಸಬೇಕೆಂದು ನಿರ್ಧರಿಸಿ ಅದರ ಕತ್ತು ಹಿಸುಕಿದ್ದಾರೆ. ಮಗು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದಾಗ ಅದು ಮೃತಪಟ್ಟಿದೆ ಎಂದು ಭಾವಿಸಿದ ದಂಪತಿ, ಕೂಡಲೇ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಸಾವು-ಬದುಕಿನ ನಡುವೆ ಹೋರಾಡಿದ ಆ ಹಸುಗೂಸು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ಹೆಣವಾಗಿ ತೂಗಾಡುತ್ತಿದ್ದ ಮನೆಯಲ್ಲೇ ಅನಾಥವಾಗಿ ಉಳಿದಿದೆ. ಕೆ.ಆರ್.ಪೇಟೆ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!