
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ಕದ್ರಿ ಉತ್ತರ ವಾರ್ಡಿನಲ್ಲಿ 5.28 ಕೋಟಿ ರೂ. ವಿಶೇಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಶಿಲನ್ಯಾಸ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.


ಈ ವೇಳೆ ಮಾತನಾಡಿದ ಶಾಸಕರು, ಬೆಳೆಯುತ್ತಿರುವ ಮಂಗಳೂರು ಶಿಕ್ಷಣ ಕ್ಷೇತ್ರದಲ್ಲಿಯೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ವಿದ್ಯಾರ್ಜನೆಗೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಇಂತಹ ವಸತಿ ನಿಲಯಗಳು ಹೆಚ್ಚಾದಷ್ಟು ದೂರದ ಊರಿನ ವಿದ್ಯಾರ್ಥಿಗಳಿಗೆ ಸದುಪಯೋಗವಾಗುತ್ತದೆ. ಶೀಘ್ರದಲ್ಲಿ ಈ ಕಾಮಗಾರಿ ಮುಗಿಯಲಿ ಎಂದು ಆಶಿಸಿದರು.

ಸ್ಥಳೀಯ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶ್ರೀಮತಿ ಶಕೀಲಾ ಕಾವ, ಪ್ರಮುಖರಾದ ನಿತಿನ್ ಕುಮಾರ್, ರವಿಶಂಕರ್ ಮಿಜಾರು, ಜಯಕುಮಾರ್, ಕಮಲಾಕ್ಷಿ, ಧೃತೇಶ್, ವೆಂಕಟೇಶ್ ಕದ್ರಿ, ಸುಂದರ ಶೆಟ್ಟಿ ಕದ್ರಿ, ಚೇತನಾ, ಶಿಲ್ಪಾ, ಗಂಗಾಧರ್ ಕದ್ರಿ, ಉಷಾ, ಗೀತಾ, ಭಾಸ್ಕರ್, ಚಿನ್ನಪ್ಪ, ನವೀನ್, ಹರೀಶ್, ಚಂದ್ರಕಾಂತ್, ಹರಿಣಾಕ್ಷ , ಸುಪ್ರೀತ, ಉಪೇಂದ್ರ, ಸದಾನಂದ ಪ್ರಭು, ಶಿವಶಂಕರ್, ಹಾಗೂ ಹಾಸ್ಟೆಲಿನ ಮಕ್ಕಳು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.