ಸಸಿಹಿತ್ಲು ಶ್ರೀ ಭಗವತೀ ದೇವಿಗೆ ವಿಜೃಂಭಣೆಯ ಬ್ರಹ್ಮಕಲಶೋತ್ಸವ

ಸುರತ್ಕಲ್: ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಇಂದು ಸಪರಿವಾರ ಶ್ರೀ ಭಗವತೀ ಅಮ್ಮನವರಿಗೆ ಬ್ರಹ್ಮಕಲಶೋತ್ಸವವು
ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ವಾನ್ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ಭಟ್ ಹೊಯ್ಗೆಗುಡ್ಡೆ ಹಾಗೂ ಶ್ರೀ ಶ್ರೀಪತಿ ಭಟ್ ಹೊಯ್ಗೆಗುಡ್ಡೆಯವರ ನೇತೃತ್ವದಲ್ಲಿ ವೇದಮೂರ್ತಿ ಶ್ರೀ ವೆಂಕಟೇಶ ತಂತ್ರಿ ಎಡಪದವುರವರ ಮಾರ್ಗದರ್ಶನದಲ್ಲಿ ನಡೆಯಿತು.


ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ರಿಂದ ಚಂಡಿಕಾಯಾಗ, ಬೆಳಿಗ್ಗೆ 11:15 ರ ವೃಷಭ ಲಗ್ನ ಮುಹೂರ್ತದಲ್ಲಿ
ಬ್ರಹ್ಮಕಲಶಾಭಿಷೇಕ, ಮಹಾ ಪೂಜೆ, ಪಲ್ಲ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.


ಈ ಸಂದರ್ಭ ಕ್ಷೇತ್ರದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಉದ್ಯಮಿ ಧನಂಜಯ ಶೆಟ್ಟಿ ಸಸಿಹಿತ್ಲು, ಕೃಷ್ಣಶೆಟ್ಟಿ ಎಕ್ಕಾರು ಮುಂಬೈ,ಸುದರ್ಶನ್ ಮೂಡಬಿದ್ರೆ, ದೇವದಾಸ ಶೆಟ್ಟಿ ಬಂಟ್ವಾಳ, ಸಿಬಿ ಕರ್ಕೇರ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ರೋಹಿದಾಸ್ ಬಂಗೇರ ಮುಂಬೈ, ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಾಮನ್ ಇಡ್ಯಾ, ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್ ಎಂ ಶ್ರೀಯಾನ್, ಉಪಾಧ್ಯಕ್ಷ ವಿಶ್ವನಾಥ ಬೆಳ್ಚಡ,ಪದಾಧಿಕಾರಿಗಳಾದ ಚಂದ್ರಶೇಖರ ನಾಣಿಲ್, ಮುರ ಸದಾಶಿವ ಶೆಟ್ಟಿ, ರಮೇಶ್ ಬಂಗೇರ, ರಾಜೇಂದ್ರ ಪ್ರಸಾದ್ ಎಕ್ಕಾರು, ಶಿವಣ್ಣ ಅಂಚನ್ ಕಾಪು, ಈಶ್ವರ ಕಟೀಲು, ಲೋಕಯ್ಯ ಸಾಲಿಯಾನ್ ಕೊಂಡೇಲ, ಅಭಿಲಾಷ್ ಶೆಟ್ಟಿ ಕಟೀಲು, ಸುರೇಶ್ ಬಂಗೇರ ತೋಕೂರು, ಗುರುರಾಜ್ ಮಲ್ಲಿಗೆಯಂಗಡಿ, ಶೆಡ್ಡೆ ಮಂಜುನಾಥ ಭಂಡಾರಿ, ಕಸ್ತೂರಿ ಪಂಜ, ವಿನೋದ್ ಸಾಲ್ಯಾನ್ ಬೆಳ್ಳಾಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಮಧ್ಯಾಹ್ನ 3 ರಿಂದ ಚಿತ್ರಾಕ್ಷೀ ಅಜಿತ್ ಬಳಗದವರಿಂದ ಗಂಗೆಗೆ ನೃತ್ಯ ನಮನ, ಸಂಜೆ ಸಮುದ್ರತೀರದಲ್ಲಿ ಯುವ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ರವರಿಂದ ಗಂಗೆಗೆ ನುಡಿ ನಮನ ಹಾಗೂ ಅದ್ಧೂರಿ ವೈಭವದ ಗಂಗಾರತಿ ನಡೆಯಲಿದೆ.


ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈಭವ ಹಾಗೂ ಗಂಗಾ ಗಾಯನ ಕಾರ್ಯಕ್ರಮ ನಡೆಯಲಿದೆ.


error: Content is protected !!