ಎಂಆರ್ ಪಿಎಲ್ ದುರಂತ: ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರ

ಸುರತ್ಕಲ್: ಎಂಅರ್ ಪಿಎಲ್ ಸಂಸ್ಥೆಯಲ್ಲಿ ಕಳೆದ ತಿಂಗಳು 30 ತಾರೀಕಿನಂದು ನಡೆದ ದುರಂತದಲ್ಲಿ ಮೃತಪಟ್ಟ ದಿ.ಮನೀಶ್ ಕರ್ಕಡ ರವರ ಕುಟುಂಬಕ್ಕೆ ಎಂಅರ್ ಪಿಎಲ್ ಸಂಸ್ಥೆಯಿಂದ 90 ಲಕ್ಷದ ಚೆಕ್ ಹಾಗೂ ಒಬ್ಬನಿಗೆ ಟ್ರಸ್ಟ್ ನಲ್ಲಿ ಉದ್ಯೋಗ ನೀಡುವ ಅಪಾಯಿಂಟ್ ಮೆಂಟ್ ಲೇಟರ್ ಅನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಎಂಅರ್ ಪಿಎಲ್ ಸಂಸ್ಥೆಯ ಎಚ್ ಅರ್ ವಿಭಾಗದ ಜಿ.ಜಿ.ಎಂ. ಪ್ರಶಾಂತ್ ಪುದುವಾಳ್, ಎಂಅರ್ ಪಿಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್, ಜತೆ ಕಾರ್ಯದರ್ಶಿ ಸುನೀಲ್, ಕೋಶಾಧಿಕಾರಿ ಪುರುಷೋತ್ತಮ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಂತೋಷ್ ಪೂಂಜ ಮುಂತಾದವರು ಉಪಸ್ಥಿತರಿದ್ದರು.

Advt
error: Content is protected !!