ಗಣೇಶಪುರದಲ್ಲಿ ಶ್ರೀ ಆಂಜನೇಯ ದೇವರ ಗರ್ಭಗುಡಿಗೆ ಶಿಲಾನ್ಯಾಸ

ಮಂಗಳೂರು: ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ,ಶ್ರೀ ರಾಮಾಂಜನೆಯ ಮಂದಿರ ಗಣೇಶಪುರ ಕಾಟಿಪಳ್ಳದ ಶ್ರೀ ಆಂಜನೇಯ ದೇವರ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಶಿಲಾನ್ಯಾಸವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಭರತ್.ವೈ.ಶೆಟ್ಟಿ ನೆರವೇರಿಸಿದರು.

ಗಣೇಶಪುರ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಸುನೀಲ್ ಭಟ್,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಉದ್ಯಮಿ ಪ್ರಶಾಂತ್ ಮುಡಾಯಿಕೊಡಿ, ಮಾಜಿ ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಕಾಟಿಪಳ್ಳ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ದಯಾಕರ್, ತುಳು ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್, ಜಾನಕಿ ಸಮೂಹ ಸಂಸ್ಥೆಯ ಮಾಲಕರಾದ ಧರ್ಮೆಂದ್ರ ಗಣೇಶಪುರ, ಧನಲಕ್ಮೀ ಕನ್ಸ್ಟ್ರಕ್ಷನ್ ಮಾಲಕರಾದ ರಾಜಾರಾಮ್ ಸಾಲ್ಯಾನ್, ಗೀತಾ, ಮಾದವ ಕುಕ್ಯಾನ್, ದುರ್ಗದಾಸ್ ಶೆಟ್ಟಿ ಕೃಷ್ಣಾಪುರ, ಶೈಲೇಶ್ ಗಣೇಶಪುರ, ದೇವರಾಜ್ ಶೆಟ್ಟಿ ಪಂಚಮಿ, ಜಯರಾಮ್ ಅಚಾರ್ಯ ಕುಳಾಯಿ, ಮಂದಿರದ ಅಧ್ಯಕ್ಷ ಶ್ರೀನಿವಾಸ್ ಅಚಾರ್ಯ, ಸತೀಶ್ ದೇವಾಡಿಗ , ಮಂದಿರದ ಸದಸ್ಯರು ಉಪಸ್ಥಿತರಿದ್ದರು.

error: Content is protected !!