ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳಿಗೆ ರಕ್ತದ ಅವಶ್ಯಕತೆ ಇದೆ. ರಂಜಾನ್ ಹಬ್ಬ ನಡೆಯುತ್ತಿರುವುದರಿಂದ ದಾನಿಗಳ ಸಂಖ್ಯೆ ಕಡಿಮೆಯಾಗಿದ್ದು, ಜಿಲ್ಲೆಯ ವಿವಿಧ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತದ ಅಭಾವ ಉಂಟಾಗಿದೆ. ಆದ್ದರಿಂದ ದಾನಿಗಳ ಸಹಕಾರ ಅತ್ಯಗತ್ಯವಾಗಿದೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದಾನಿಗಳಿಗೆ ಅನುಕೂಲವಾಗುವಂತೆ, Father Muller Hospital ಮತ್ತು KMC Attavar ನಲ್ಲಿ ರಾತ್ರಿ 8:30 ಗಂಟೆಯವರೆಗೆ ರಕ್ತದಾನ ಸ್ವೀಕರಿಸಲಾಗುತ್ತದೆ.

error: Content is protected !!