ಫೆ.28ರ ವರೆಗೆ ಮಂಗಳೂರಿನ ಮೇಲೆ ಸೈಕ್ಲೋನಿಕ್ ಸುಳಿ: ಸಿಡಿಲಿನ ಹೊಡೆತಕ್ಕೆ ನಡುಗಲಿದೆ ಕರಾವಳಿ!

ಮಂಗಳೂರು: ಕೇರಳದ ಗಡಿಯಲ್ಲಿ ವಕ್ಕರಿಸಿರುವ ಸೈಕ್ಲೋನಿಕ್ ಸುಳಿವು ಕೇವಲ ಮಲೆಯಾಳಿಗಳಿಗಷ್ಟೇ ಅಲ್ಲ, ನಮ್ಮ ಮಂಗಳೂರಿನ ಮಂದಿಗೂ ಎಚ್ಚರಿಕೆಯ ಗಂಟೆ ಬಾರಿಸಿದೆ. ಫೆಬ್ರವರಿ 28ರವರೆಗೆ ಕರಾವಳಿಯ ಆಕಾಶದಲ್ಲಿ ಮೋಡಗಳು ಕಣ್ಣ ಮುಚ್ಚಾಲೆ ಆಡಲಿವೆ. ಮಂಗಳೂರು, ಉಳ್ಳಾಲ, ಬಂಟ್ವಾಳ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

ಅರಬ್ಬಿ ಸಮುದ್ರದ ಅಂಚಿನಲ್ಲಿ ಗಾಳಿಯ ವೇಗ ಗಂಟೆಗೆ 60 ಕಿಲೋಮೀಟರ್ ಮುಟ್ಟಬಹುದು. ಸಮುದ್ರ ರಾಜ ಅಂದುಕೊಂಡಷ್ಟು ಶಾಂತವಾಗಿಲ್ಲ. ಮಂಗಳೂರಿನ ಸುತ್ತಮುತ್ತ ಮಿಂಚಿನ ಅಬ್ಬರ ಜೋರಾಗಿರಲಿದೆ. ಮಳೆಗಿಂತಲೂ ಅಪಾಯಕಾರಿಯಾಗಿ ಸಿಡಿಲಿನ ಹೊಡೆತ ಜೋರಾಗುವ ಸಾಧ್ಯತೆ ಇದೆ. ಸಮುದ್ರದ ಅಂಚಿನಲ್ಲಿ ಗಾಳಿಯ ರಭಸ ಹೆಚ್ಚಾಗಲಿದೆ. ಮೀನುಗಾರಿಕೆಗೆ ಅಧಿಕೃತ ನಿಷೇಧವಿಲ್ಲದಿದ್ದರೂ, ಸಮುದ್ರಕ್ಕೆ ಇಳಿಯುವ ಮುನ್ನ ಹವಾಮಾನ ಹೇಗಿದೆ ಎಂದು ನೋಡುವುದು ಒಳ್ಳೆಯದು. ಆಕಾಶ ಕಪ್ಪಾದಾಗ ಫೋನ್ ಹಿಡಿದು ರೀಲ್ಸ್ ಮಾಡೋದನ್ನ ನಿಲ್ಲಿಸಿ. ಎಲೆಕ್ಟ್ರಾನಿಕ್ ಸಾಧನಗಳನ್ನು ಅನ್‌ಪ್ಲಗ್ ಮಾಡಿ. ಮನೆಯ ಹೊರಗೆ ಕಟ್ಟಿದ ದನ-ಕರುಗಳ ಬಗ್ಗೆ ಕಾಳಜಿ ಇರಲಿ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

error: Content is protected !!