ಉಡುಪಿ: ಮೈಮೇಲೆ ಬೆಂಕಿ ಹಚ್ಚಿಕೊಂಡು ಗದಗಿನ ಯುವಕನ ‘ಹೈಡ್ರಾಮಾ’!

ಉಡುಪಿ: ಸದಾ ವಾಹನಗಳ ಸದ್ದಿನಿಂದ, ಸಂಚಾರ ದಟ್ಟಣೆಯಿಂದ ಗಿಜಿಗುಡುವ ಉಡುಪಿಯ ಕಲ್ಸಂಕ ಜಂಕ್ಷನ್‌ನಲ್ಲಿ ಇಂದು ನಡೆದದ್ದು ಸಾಕ್ಷಾತ್ ಮೃತ್ಯುವಿನ ಜೊತೆಗಿನ ಚೆಲ್ಲಾಟ. ಗದಗಿನ ಆ ಯುವಕನ ಕೈಯಲ್ಲಿದ್ದದ್ದು ನೀರಿನ ಬಾಟಲಿಯಲ್ಲ, ಅದು ಮೈ ಸುಡುವ ಪೆಟ್ರೋಲ್!

ಬಾಧಿತ ಯುವಕ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಾಗ ಜಂಕ್ಷನ್‌ನಲ್ಲಿ ಉಂಟಾದ ಭಯದ ವಾತಾವರಣ ಅಷ್ಟಿಷ್ಟಲ್ಲ. ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿ, ಎಲ್ಲರನ್ನೂ ದಿಗಿಲುಗೊಳಿಸಿ ಆತ ಆಡುತ್ತಿದ್ದ ‘ಹುಚ್ಚಾಟ’ ಕಂಡು ಜನ ಬೆಚ್ಚಿಬಿದ್ದಿದ್ದರು. ಆದರೆ, ಅಲ್ಲಿ ಕೆಲಸ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆ ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಾಹಸದಿಂದ ಆ ಯುವಕನ ಪ್ರಾಣಪಕ್ಷಿ ಹಾರಿಹೋಗುವುದು ತಪ್ಪಿತು.

ಹೇಳಿ ಕೇಳಿ ಇದು ಅವನಿಗೆ ಮೊದಲೇನಲ್ಲ! ಈ ಹಿಂದೆಯೂ ಹಲವು ಬಾರಿ ಪೆಟ್ರೋಲ್ ಸುರಿದುಕೊಂಡು ಸಾಯುತ್ತೇನೆಂದು ಬೊಬ್ಬೆ ಹಾಕುತ್ತಿದ್ದ ಆತನನ್ನು ಪೊಲೀಸರು ಜಾಣ್ಮೆಯಿಂದ ಪಾರು ಮಾಡಿದ್ದರು. ಈಗ ಮತ್ತೊಮ್ಮೆ ಅದೇ ಹಾದಿ ಹಿಡಿದಿದ್ದವನನ್ನು ವಶಕ್ಕೆ ಪಡೆದ ಪೊಲೀಸರು, ಆತನ ಮನವೊಲಿಸಿ ಮತ್ತೆ ಗದಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟಕ್ಕೂ ಈ ಯುವಕನ ಹುಚ್ಚಾಟಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

error: Content is protected !!