ಮುರುಡೇಶ್ವರ ಶೆಟ್ಟರಕೇರಿಯ ಭಾರತ ಗೆಸ್ಟ್ ಹೌಸ್‌ನಲ್ಲಿ ವೇ*ಶ್ಯಾವಾಟಿಕೆ; ಓರ್ವ ವಶ!!!

ಭಟ್ಕಳ: ಮುರುಡೇಶ್ವರದಲ್ಲಿ ಅಕ್ರಮವಾಗಿ ವೇ*ಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯನ್ನ ಬಂಧಿಸಿ ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಿರುವ ಘಟನೆ ನಡೆದಿದೆ. ಮುರ್ಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚನಾಳ ನೇತೃತ್ವದಲ್ಲಿ ಪಿಎಸ್‌ಐಗಳಾದ ಹಣಮಂತ ಬಿರಾದಾರ, ಲೋಕನಾಥ ರಾಠೋಡ ತಂಡದಿಂದ ದಾ*ಳಿ ನಡೆಸಿತ್ತು. ದಾ*ಳಿಯ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಿ, ಮೂವರನ್ನ ವಿಚಾರಣೆ ನಡೆಸಲಾಗಿದೆ.

ಪ್ರಕರಣ ಸಂಬಂಧಿಸಿ ಆರೋಪಿ ರೂಮ್ ಬಾಯ್ ಹೆರಾಡಿ ಕಾಯ್ಕಿಣಿ ನಿವಾಸಿ ಸುರೇಶ ನಾಗಪ್ಪ ನಾಯ್ಕ (43), ಬಂಧಿಸಲಾಗಿದೆ. ಆರೋಪಿ ಹಣದ ಆಮಿಷ ತೋರಿಸಿ ಮಹಿಳೆಯರನ್ನು ಲಾಡ್ಜ್‌ನಲ್ಲಿ ಇಟ್ಟು ವೇ*ಶ್ಯಾವಾಟಿಕೆ ನಡೆಸುತ್ತಿದ್ದ.  ದಾ*ಳಿಯ ವೇಳೆ ಸಿಕ್ಕ ಸೊತ್ತುಗಳ ಜಪ್ತಿ ಮಾಡಿ ಆರೋಪಿಯ ವಿರುದ್ಧ ಪ್ರಕರಣ ದಾಖಿಸಲಾಗಿದೆ. ರಕ್ಷಿಸಲಾದ ಮಹಿಳೆಯರನ್ನು ಭಟ್ಕಳದ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.

error: Content is protected !!