ಸುರತ್ಕಲ್: ಸೂರಿಂಜೆ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವವು ಎಪ್ರಿಲ್ 2 ರಿಂದ ಎಪ್ರಿಲ್ 8 ರವರೆಗೆ ನಡೆಯಲಿದ್ದು ಅದರ ಪೂರ್ವಭಾವಿ ಸಭೆಯು ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.

ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ತೇವು, ಸಮಿತಿ ಗೌರವಾಧ್ಯಕ್ಷರಾದ ಅನಿಲ್ ಶೆಟ್ಟಿ ತೇವು ಸೂರಿಂಜೆ, ಸತೀಶ್ ಹೆಗಡೆ ಮಿತ್ತೋಡಿ, ಸತೀಶ್ ಶೆಟ್ಟಿ ಬೈಲಗುತ್ತು ಪಂಜ, ತಿಲಕ್ ರಾಜ್ ಕೃಷ್ಣಾಪುರ, ಪ್ರತಾಪ್ ಶೆಟ್ಟಿ ಕಲ್ಲಂಜಬಾಳಿಕೆ, ಸಮಿತಿ ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಪ್ರಸಾದ್ ಅಂಚನ್, ಜಯಪ್ರಕಾಶ್ ಸೂರಿಂಜೆ, ನಿತೇಶ್ ಶೆಟ್ಟಿ ಎಕ್ಕಾರ್ ಉಪಸ್ಥಿತರಿದ್ದರು.\

ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮಿತಿಗಳ ಬಗ್ಗೆ ಚರ್ಚಿಸಲಾಯಿತು.