ಬ್ರಿಟಿಷ್ ಅರಮನೆಗೆ ಎಪ್‌ಸ್ಟೀನ್ ದೆವ್ವದ ಕಾಟ: ಕಾಮಪಿಶಾಚಿಯ ಬಲೆಗೆ ಬಿದ್ದ ಮಾಜಿ ಪ್ರಿನ್ಸ್ ಆ್ಯಂಡ್ರ್ಯೂ ಈಗ ಜೈಲು ಹಕ್ಕಿ

ಬ್ರಿಟಿಷ್ ರಾಜಮನೆತನದ ಅಂಗಳದಲ್ಲಿ ಈಗ ಸುರಿಯುತ್ತಿರುವುದು ಮಳೆಯಲ್ಲ, ಅದು ಮರ್ಯಾದೆಯ ರಕ್ತ! ರಾಜ ಚಾರ್ಲ್ಸ್ ತಲೆ ಮೇಲೆ ಕಿರೀಟವನ್ನೇನೋ ತೊಟ್ಟಿದ್ದಾರೆ, ಆದರೆ ಅವರ ಸ್ವಂತ ತಮ್ಮ ಆ್ಯಂಡ್ರ್ಯೂ ಮೌಂಟ್ ಬ್ಯಾಟನ್ ಈಗ ಕಂಬಿಗಳ ಹಿಂದೆ ಕೂತು ಅರಮನೆಯ ಹಳೇ ಕಥೆಗಳನ್ನು ಮೆಲುಕು ಹಾಕುತ್ತಿದ್ದಾರೆ. ಅದು ಫೆಬ್ರವರಿ 19ರ ಆ ಕರಾಳ ರಾತ್ರಿ. ಯಾವಾಗ ಥೇಮ್ಸ್ ವ್ಯಾಲಿ ಪೊಲೀಸರು ನಾರ್ಫೋಕ್‌ನ ಆ ಎಸ್ಟೇಟ್‌ಗೆ ನುಗ್ಗಿದರೋ, ಅಂದೇ ಬ್ರಿಟಿಷ್ ಇತಿಹಾಸದ ಒಂದು ಅಸಹ್ಯಕರ ಅಧ್ಯಾಯ ಶುರುವಾಯ್ತು.

Ex-Prince Andrew’s arrest spurs Epstein accountability calls from UK to US

ಆ ಮೂರು ಮಿಲಿಯನ್ ಪುಟಗಳ ನರಕ:
ಯಾವ ಎಪ್ಸ್ಟೀನ್ ಜೈಲಿನಲ್ಲಿ ನೇಣಿಗೆ ಕೊರಳೊಡ್ಡಿದ್ದನೋ, ಆತ ಸಾಯುವ ಮುನ್ನ ಬರೆದಿಟ್ಟಿದ್ದ ಆ ಮೂರು ಮಿಲಿಯನ್ ಪುಟಗಳ ದಾಖಲೆಗಳು ಈಗ ಒಂದೊಂದಾಗಿ ಸತ್ಯವನ್ನು ಉಗುಳುತ್ತಿವೆ. ಆ್ಯಂಡ್ರ್ಯೂ ಕೇವಲ ಎಪ್ಸ್ಟೀನ್ ಜೊತೆ ಪಾರ್ಟಿ ಮಾಡುತ್ತಿರಲಿಲ್ಲ, ಬದಲಿಗೆ ಬ್ರಿಟಿಷ್ ಸರ್ಕಾರದ ಅತ್ಯಂತ ಗೌಪ್ಯ ʻಬಿಸಿನೆಸ್ ರಿಪೋರ್ಟ್’ಗಳನ್ನು ಆ ಕಾಮಪಿಶಾಚಿಯ ಕೈಗಿಡುತ್ತಿದ್ದರು. ದೇಶದ ಮಾಹಿತಿಯನ್ನು ಹೆಣ್ಣಿನ ಮೋಹಕ್ಕೆ ಬಲಿಯಿಟ್ಟಿದ್ದ ಈ ʻಮಾಜಿ’ ರಾಜಕುಮಾರನಿಗೆ ಈಗ ಕಾನೂನು ಸರಿಯಾದ ಪಾಠ ಕಲಿಸಿದೆ.

ಕಿಂಗ್ ಚಾರ್ಲ್ಸ್ ಕೊಟ್ಟ ಆ ಕೊನೆಯ ಏಟು:
ಬಂಧನದ ಬೆನ್ನಲ್ಲೇ ಲಂಡನ್‌ನಿಂದ ಹರಿದುಬಂದ ಸುದ್ದಿಗಳು ಮೈ ಜುಂ ಎನ್ನುತ್ತವೆ. ಅಣ್ಣ ಚಾರ್ಲ್ಸ್ ಈಗಾಗಲೇ ತಮ್ಮನಿಗೆ ಕೊಟ್ಟಿದ್ದ ʻಪ್ರಿನ್ಸ್’ ಬಿರುದನ್ನು ಕಿತ್ತುಕೊಂಡಿದ್ದರು. ಆದರೆ ಈಗ, ಆ್ಯಂಡ್ರ್ಯೂಗೆ ಅರಮನೆಯಿಂದ ಬರುವ ಪ್ರತಿಯೊಂದು ಪೈಸೆಯನ್ನೂ ನಿಲ್ಲಿಸಲು ಕಿಂಗ್ ಚಾರ್ಲ್ಸ್ ಆದೇಶ ಹೊರಡಿಸಿದ್ದಾರೆ ಎಂಬ ಸುದ್ದಿ ಅರಮನೆಯ ಕಾರಿಡಾರ್‌ಗಳಲ್ಲಿ ಹರಿದಾಡುತ್ತಿದೆ. ಅಂದರೆ, ಇನ್ಮೇಲೆ ಈ ಆ್ಯಂಡ್ರ್ಯೂಗೆ ಅರಮನೆಯ ಊಟವೂ ಇಲ್ಲ, ರಕ್ಷಣೆಯೂ ಇಲ್ಲ!

ಪೊಲೀಸರು ಆ್ಯಂಡ್ರ್ಯೂನನ್ನು ವಿಚಾರಣೆ ನಡೆಸುವಾಗ ಒಂದು ಡೈರಿ ಪತ್ತೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆ ಡೈರಿಯಲ್ಲಿ ಎಪ್ಸ್ಟೀನ್ ದ್ವೀಪಕ್ಕೆ ಹೋಗುತ್ತಿದ್ದ ಜಗತ್ತಿನ ಇನ್ಯಾವ ʻದೊಡ್ಡ’ ತಲೆಗಳ ಹೆಸರಿದೆ? ಈ ತನಿಖೆ ಎಲ್ಲಿಗೆ ಹೋಗಿ ನಿಲ್ಲುತ್ತೆ? ಬ್ರಿಟಿಷ್ ಪೊಲೀಸರ ಈ ದಾಳಿ ಕೇವಲ ಆ್ಯಂಡ್ರ್ಯೂಗೆ ಮುಗಿಯಲ್ಲ, ಇದು ಅರಮನೆಯ ಇನ್ನಷ್ಟು ಕರಾಳ ರಹಸ್ಯಗಳನ್ನು ಬಗೆಯಲಿದೆ.

ಆಚೆ ಬಂದ ಮುದಿಯ!

ಬ್ರಿಟಿಷ್ ಅರಮನೆಯ ಆ ‘ಪ್ಲೇ ಬಾಯ್’ ಆಂಡ್ರ್ಯೂ ಕೊನೆಗೂ ಜೈಲಿನ ಕತ್ತಲ ಕೋಣೆಯಿಂದ ಆಚೆಗಂತೂ ಬಂದಿದ್ದಾನೆ. ಆದರೆ, ಆಚೆ ಬಂದ ತಕ್ಷಣ ಆತನಿಗೆ ಎದುರಾಗಿದ್ದು ಸೂರ್ಯನ ಬೆಳಕಲ್ಲ, ಬದಲಿಗೆ ಇಡೀ ಜಗತ್ತು ಆತನ ಮುಖದ ಮೇಲೆ ಉಗಿಯುತ್ತಿರುವ ಅಸಹ್ಯದ ಉಗುಳು! ಜೆಫ್ರಿ ಎಪ್‌ಸ್ಟೀನ್ ಎಂಬ ಆ ಕಾಮಪಿಶಾಚಿಯ ದೆವ್ವದ ಕಾಟ ಎಷ್ಟಿದೆ ಅಂದರೆ, ಆಂಡ್ರ್ಯೂ ಜೈಲಿನಿಂದ ರಿಲೀಸ್ ಆಗಿರಬಹುದು, ಆದರೆ ಬ್ರಿಟಿಷ್ ರಾಜಮನೆತನದ ಮರ್ಯಾದೆಯ ಸ್ಮಶಾನದಿಂದ ಆತನಿಗೆ ಬಿಡುಗಡೆಯೇ ಇಲ್ಲ. ಅಣ್ಣ ಚಾರ್ಲ್ಸ್ ಈಗಾಗಲೇ ಅರಮನೆಯ ಬಾಗಿಲನ್ನು ಶಾಶ್ವತವಾಗಿ ಭದ್ರಪಡಿಸಿದ್ದಾರೆ. ಕೈಯಲ್ಲಿ ಬಿಡಿಗಾಸಿಲ್ಲದೆ, ಮೈಮೇಲಿದ್ದ ‘ಪ್ರಿನ್ಸ್’ ಪಟ್ಟವೂ ಇಲ್ಲದೆ, ಈಗ ಆಂಡ್ರ್ಯೂ ಅಕ್ಷರಶಃ ಜೀವಂತ ಶವ. ಎಪ್‌ಸ್ಟೀನ್ ಎಂಬ ದೆವ್ವ ಹಚ್ಚಿದ ಬೆಂಕಿ ಅರಮನೆಯ ಪ್ರತಿಷ್ಠೆಯನ್ನಷ್ಟೇ ಅಲ್ಲ, ಆಂಡ್ರ್ಯೂ ಎಂಬ ಹುಂಬನ ಬದುಕನ್ನೂ ಸುಟ್ಟು ಬೂದಿ ಮಾಡಿದೆ. ಆತ ಈಗ ಜೈಲಿನಿಂದ ಹೊರಬಂದಿದ್ದಾನೋ ಅಥವಾ ನರಕದ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾನೋ ಕಾಲವೇ ಉತ್ತರಿಸಬೇಕು!

ಅಧಿಕಾರದ ಅಮಲು ಮತ್ತು ಕಾಮದ ಹಸಿವು ಮನುಷ್ಯನನ್ನು ಅರಮನೆಯ ಪಲ್ಲಕ್ಕಿಯಿಂದ ಜೈಲಿನ ಅಂಧಕಾರಕ್ಕೆ ಹೇಗೆ ನೂಕುತ್ತದೆ ಎನ್ನುವುದಕ್ಕೆ ಆ್ಯಂಡ್ರ್ಯೂನ ಈ ಕಥೆಯೇ ಸಾಕ್ಷಿ. ಆ್ಯಂಡ್ರ್ಯೂ ಈಗ ಅಕ್ಷರಶಃ ಅನಾಥ! “ಎಪ್ಸ್ಟೀನ್ʼ ಎಂಬ ಕಾಮಪಿಶಾಚಿ ಸತ್ತಿರಬಹುದು, ಆದರೆ ಆತನ ನೆರಳು ಮಾತ್ರ ಬ್ರಿಟಿಷ್ ಅರಮನೆಯನ್ನು ಬೆನ್ನಟ್ಟಿ ಬೇಟೆಯಾಡುತ್ತಿದೆ. ಇದು ಅಂತಿಮವಲ್ಲ, ಇದು ಕೇವಲ ಆರಂಭ!”

error: Content is protected !!