T20 World Cup 2026: ಸೂಪರ್-8 ಸುತ್ತಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ…

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತದಲ್ಲಿದ್ದು, ಈಗಾಗಲೇ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಹಾಗೆಯೇ 12 ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಅದರಂತೆ ಸೂಪರ್-8 ಸುತ್ತಿನಲ್ಲಿ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಝಿಂಬಾಬ್ವೆ, ಪಾಕಿಸ್ತಾನ್, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ.

ಸೂಪರ್-8ಕ್ಕೆ ಅರ್ಹತೆ ಪಡೆದ 8 ತಂಡಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಉಳಿದ ಮೂರು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡುತ್ತದೆ. ಅಂದರೆ ಪ್ರತಿ ತಂಡಕ್ಕೆ ಒಟ್ಟು 3 ಪಂದ್ಯಗಳು ಇರುತ್ತವೆ.

ಪ್ರತಿ ಗೆಲುವಿಗೆ 2 ಪಾಯಿಂಟ್ಸ್, ಯಾವುದೇ ಫಲಿತಾಂಶ ಬಾರದಿದ್ದರೆ 1 ಪಾಯಿಂಟ್ ಮತ್ತು ಸೋಲಿಗೆ 0 ಪಾಯಿಂಟ್ ನೀಡಲಾಗುತ್ತದೆ. ಸೂಪರ್-8ರ ಪ್ರತಿ ಗುಂಪಿನಿಂದ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ.

ಗ್ರೂಪ್ 1: ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
ಗ್ರೂಪ್ 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.

ಫೆಬ್ರವರಿ 21; ನ್ಯೂಝಿಲೆಂಡ್ vs ಪಾಕಿಸ್ತಾನ್ ಸಂಜೆ 7:00 ಕ್ಕೆ
ಫೆಬ್ರವರಿ 22; ಇಂಗ್ಲೆಂಡ್ vs ಶ್ರೀಲಂಕಾ ಮಧ್ಯಾಹ್ನ 3:00
ಫೆಬ್ರವರಿ 22; ಭಾರತ vs ಸೌತ್ ಆಫ್ರಿಕಾ ಸಂಜೆ 7:00 ಕ್ಕೆ
ಫೆಬ್ರವರಿ 23; ವೆಸ್ಟ್ ಇಂಡೀಸ್ vs ಝಿಂಬಾಬ್ವೆ ಸಂಜೆ 7:00 ಕ್ಕೆ
ಫೆಬ್ರವರಿ 24; ಇಂಗ್ಲೆಂಡ್ vs ಪಾಕಿಸ್ತಾನ್ ಸಂಜೆ 7:00 ಕ್ಕೆ
ಫೆಬ್ರವರಿ 25; ನ್ಯೂಝಿಲೆಂಡ್ vs ಶ್ರೀಲಂಕಾ ಸಂಜೆ 7:00 ಕ್ಕೆ
ಫೆಬ್ರವರಿ 26; ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ ಮಧ್ಯಾಹ್ನ 3:00
ಫೆಬ್ರವರಿ 26; ಭಾರತ vs ಝಿಂಬಾಬ್ವೆ ಸಂಜೆ 7:00 ಕ್ಕೆ
ಫೆಬ್ರವರಿ 27; ಗ್ಲೆಂಡ್ vs ನ್ಯೂಝೀಲೆಂಡ್ ಸಂಜೆ 7:00 ಕ್ಕೆ
ಫೆಬ್ರವರಿ 28; ಶ್ರೀಲಂಕಾ vs ಪಾಕಿಸ್ತಾನ್ ಸಂಜೆ 7:00 ಕ್ಕೆ
ಮಾರ್ಚ್ 1; ಸೌತ್ ಆಫ್ರಿಕಾ vs ಝಿಂಬಾಬ್ವೆ ಮಧ್ಯಾಹ್ನ 3:00
ಮಾರ್ಚ್ 1; ಭಾರತ vs ವೆಸ್ಟ್ ಇಂಡೀಸ್ ಸಂಜೆ 7:00 ಕ್ಕೆ

error: Content is protected !!