ವಿಟ್ಲದ ಕ್ಲಿನಿಕ್ ಲ್ಯಾಬೊರೇಟರಿ ವಿರುದ್ಧ ವೈದ್ಯರ ದೂರು

ಮಂಗಳೂರು:ವಿಟ್ಲದ ಚಂದಳಿಕೆ ಪರಿಸರದ ‘ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿ’ಯಲ್ಲಿ ನೀಡಲಾದ ರಕ್ತ ಪರೀಕ್ಷಾ ವರದಿಯಲ್ಲಿ (CBC Report) ಪ್ಲೇಟ್‌ಲೆಟ್ ಸಂಖ್ಯೆ ಅಸಹಜವಾಗಿ ವ್ಯತ್ಯಾಸವಾಗಿದ್ದು, ರೋಗಿಯ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಕಿಯಾನ್ಸ್ ಹರ್ಬಲ್ ಸೆಂಟರ್ ಮಾಲಕ ಶರತ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಆರೋಪಗಳು:

“ನಾನು ವಿಟ್ಲ ಮತ್ತು ಕಬಕ ಮಧ್ಯವಿರುವ ಚಂದಳಿಕೆ ಪರಿಸರದಲ್ಲಿ ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೊರೇಟರಿನಲ್ಲಿ CBC ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ ಸಮಯ ಸುಮಾರು 10 ಗಂಟೆ 50 ನಿಮಿಷ ಬೆಳಗ್ಗೆ ಅದರ ಸಂಪೂರ್ಣ ರಿಪೋರ್ಟ್ ನನಗೆ ಬೆಳಗ್ಗೆ 11:03ಕ್ಕೆ ಈ ನಂಬರ್ 7259510489ನಿಂದ ವಾಟ್ಸಪ್ ನಲ್ಲಿ ರಿಪೋರ್ಟ್ ನೀಡಿದ್ದಾರೆ ಆ ರಿಪೋರ್ಟ್ ನಲ್ಲಿ ಹಿಮೋಗ್ಲೋಬಿನ್ 14 ತೋರಿಸುತ್ತಿದೆ ಹಾಗೆಯೇ ಪ್ಲೇಟೆಟ್ 18000 ತೋರಿಸುತ್ತಿದೆ. ಆ ರಿಪೋರ್ಟ್ ಅನ್ನು ನೋಡಿ ಕೂಡಲೇ ರಕ್ಷಾ ಕ್ಲಿನಿಕ್ ಗೆ ಕಾಲ್ ಮಾಡಿ ನೀವು ಮಾಡಿರುವಂತಹ ರಿಪೋರ್ಟ್ ಸರಿ ಇದೆಯೇ ಎಂದು ಕೇಳಿದಾಗ ಅಲ್ಲಿಯ ಸಿಬ್ಬಂದಿ ನಾವು ಮಾಡಿರುವಂತಹ ರಿಪೋರ್ಟ್ ಸರಿ ಇದೆ ನೀವು ಬೇರೆ ಎಲ್ಲಿ ಸಹ ಮಾಡಿಸಿ ತೊಂದರೆ ಇಲ್ಲ ನಾನು ನನ್ನ ವೈದ್ಯರಲ್ಲಿ ತೋರಿಸಿ ನಿಮಗೆ ನಾನು ಈ ರಿಪೋರ್ಟ್ ವಾಟ್ಸಾಪ್ ಮುಖಾಂತರ ಕಳಿಸಿದ್ದೇನೆ. ನನಗೆ ಈ ರಿಪೋರ್ಟ್ ನೋಡಿ ಅತಿ ಹೆಚ್ಚು ವ್ಯತ್ಯಾಸ ಕಂಡು ಬಂದಿದ್ದು ನಾನು ಕೂಡಲೇ ವಿಟ್ಲದಲ್ಲಿರುವ ಬೆಳಗ್ಗೆ 11:30ಕ್ಕೆ ಧನ್ವಂತರಿಯಲ್ಲಿ ಪ್ಲೇಟ್ಲೆಟ್ ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ” ಎಂದರು.

ಆ ರಿಪೋರ್ಟ್ ನಲ್ಲಿ ನನಗೆ Vcare laboratory ಯಲ್ಲಿ 1 ಲಕ್ಷ ಮತ್ತು ಧನ್ವಂತರಿ ಲ್ಯಾಬೋರೇಟರಿಗೆ ಯಲ್ಲಿ 1.13 ಲಕ್ಷ ತೋರಿಸಿದೆ ಸರಿಯಾದ ಮಾಹಿತಿ ಸಿಕ್ಕಿದ್ದು ಅದನ್ನು ನೋಡಿ ನಾನು ಹಿಂತಿರುಗಿ ಚಂದಳಿಕೆ ಪರಿಸರದಲ್ಲಿರುವ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿ ಬಂದು ಕೇಳಿದೆ ನನ್ನ ರಿಪೋರ್ಟ್ ಗೆ ಸಹಿ ಹಾಕಿ ಕೊಡಿ ಎಂದು ಕೇಳಿದಾಗ ಅಲ್ಲಿಯ ವೈದ್ಯರು ನನ್ನಲ್ಲಿ ಅವರು ನನ್ನಲ್ಲಿ ಹೇಳಿದ್ದಾರೆ ನಾವು ವಿಟ್ಲದಲ್ಲಿ ಕ್ಲಿನಿಕ್ ಮಾಡಲು ಟಿ ಹೆಚ್ ಓ ಹಾಗೂ ಡಿ ಹೆಚ್ ಓ ಅವರನ್ನು ಸೆಟ್ಟಿಂಗ್ ಮಾಡಿದ್ದೇವೆ ನೀವು ಯಾರಿಗೆ ಬೇಕಾದರೂ ಕಂಪ್ಲೆಂಟ್ ಮಾಡಿ ನಾವು ಹೆದರಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

ಇದನ್ನು ಕೇಳಿ ನನಗೆ ಆಘಾತವಾಗಿತ್ತು ಹಾಗೆಯೇ ನನಗೆ ಬೇರೆ ಉಪಾಯವಿಲ್ಲದೆ ಪೋಲಿಸ್ ಅಧಿಕಾರಿಗೆ ದೂರು ನೀಡಲು ಬಂದೆ ನಂತರ ಪೊಲೀಸ್ ಅಧಿಕಾರಿಗಳು ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿ ಮಾಲೀಕರಾದ ಚಿನ್ಮಯ್ ಅವರಲ್ಲಿ ಮಾತನಾಡಿದರು. ಚಿನ್ಮಯ್ ಅವರು ಪೊಲೀಸರಿಗೆ ನಿಮಗೆ ಸಾಧ್ಯವಾದರೆ ನಮ್ಮ ಕ್ಲಿನಿಕ್ಕಿನ ಒಂದು ಸೀಲ್ ಅಥವಾ ಸಹಿ ಹಾಕಿಸಿ ಎಂದು ಅವರಿಗೆ ಚಾಲೆಂಜ್ ಮಾಡಿದರು. ನಂತರ ಪೊಲೀಸ್ ಅಧಿಕಾರಿಗಳು ನನಗೆ ಒಂದು ಮಾರ್ಗಸೂಚಿಸಿದರು ನೀವು ಇದನ್ನು ನೇರವಾಗಿ THO ಮತ್ತು DHO ದೂರು ನೀಡಿ ಎಂದು ನನಗೆ ತಿಳಿಸಿದ್ದಾರೆ.

ನಾನು ತಿಳಿಸುವುದೇನೆಂದರೆ ಅವರು ನಮ್ಮಲ್ಲಿ ಅಷ್ಟು ಉಡಾಫೆಯಿಂದ ಮಾತನಾಡಲು ಯಾರನ್ನು ಸೆಟ್ಟಿಂಗ್ ಮಾಡಿದ್ದಾರೆ ಅನ್ನೋದು ನನಗೆ ಸರಿಯಾಗಿ ತಿಳಿಯಲಿಲ್ಲ ಆದರೆ ಅದು ನನಗೆ ಅಗತ್ಯವಿಲ್ಲ ತಕ್ಷಣವೇ ಮೇಲ್ಕಂಡ ದೂರಿಗೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಂಡು ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಬಂದ್ ಮಾಡದಿದ್ದರೆ ಶಿಫಾರಸ್ಸು ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

error: Content is protected !!