ಅದೊಂದು ಅಮಾವಾಸ್ಯೆಯ ಕತ್ತಲನ್ನು ಮೀರಿಸುವಂತಹ ಕ್ರೂರ ರಾತ್ರಿ. ಇಂದೋರ್‌ನ ಆ ಸಣ್ಣ ಬಾಡಿಗೆ ಕೊಠಡಿಯೊಳಗೆ ಗಾಳಿ ಕೂಡ ಹೆಪ್ಪುಗಟ್ಟಿತ್ತು. ಮನುಷ್ಯನ ವಿಕೃತ ಕಾಮಕ್ಕೂ ಮತ್ತು ಮಾಟ-ಮಂತ್ರದ ಅತೀಂದ್ರಿಯ ಲೋಕಕ್ಕೂ ಇರುವ ಅಂತರ ಅದೆಷ್ಟು ತೆಳುವಾಗಿರುತ್ತದೆ ಎನ್ನುವುದಕ್ಕೆ ಈ ಪಿಯೂಷ್ ಧಮ್ನೋಟಿಯಾ ಎಂಬ ನರಪಿಶಾಚಿಯೇ ಸಾಕ್ಷಿ. ಎಂಬಿಎ ಓದುತ್ತಿದ್ದ ಆ ಹುಡುಗಿ, ತನ್ನ ಪ್ರೇಮಿಯನ್ನೇ ದೇವರೆಂದು ನಂಬಿದ್ದಳು. ಆದರೆ ಆ ದೇವಸ್ಥಾನದ ಒಳಗೆ ಕುಳಿತಿದ್ದು ಸಾಕ್ಷಾತ್ ಸೈತಾನ ಅಂತ ಅವಳಿಗೆ ಗೊತ್ತಾದಾಗ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು!

ನೋಡಿ ಆ ರಾಕ್ಷಸನ ಭೀಭತ್ಸ ಆಟ..
“ಗಿಫ್ಟ್ ಕೊಡ್ತೀನಿ ಕಣ್ಣು ಮುಚ್ಚು” ಅಂದಾಗ ಆಕೆ ಮುಗ್ಧವಾಗಿ ನಕ್ಕಿದ್ದಳು. ಆದರೆ ಆ ಕಿರಾತಕ ಅವಳ ಕಣ್ಣಿಗೆ ಬಟ್ಟೆ ಕಟ್ಟಿದ್ದು ಆಕೆಯನ್ನ ಸುರಕ್ಷಿತವಾಗಿ ಇಡುವುದಕ್ಕಲ್ಲ, ಬದಲಿಗೆ ಆಕೆಯನ್ನ ಬಲಿ ಕೊಡಲಿಕ್ಕೆ! ಕೈಕಾಲುಗಳನ್ನು ಹಗ್ಗದಿಂದ ಬಿಗಿದು, ಆಕೆ ಉಸಿರಾಡಲು ಮೀನಿನಂತೆ ಒದ್ದಾಡುತ್ತಿದ್ದಾಗ, ಈ ಸೈಕೋ ಪಿಯೂಷ್ ಆಕೆಯ ಕುತ್ತಿಗೆಯನ್ನು ಬಿಗಿದು ಹಿಡಿದಿದ್ದ. ಆಕೆ ಪ್ರಾಣ ಬಿಡುವಾಗ ಹೊರಟ ʻಕ್ರೀ….ʼ ಆ ಕೊನೆಯ ಚೀತ್ಕಾರ ಆ ರೂಮಿನ ಗೋಡೆಗಳನ್ನೇ ನಡುಗಿಸಿತ್ತು.

ಆದರೆ ಅಸಲಿ ‘ಹಾರರ್’ ಸಿನಿಮಾ ಶುರುವಾಗಿದ್ದೇ ಆಮೇಲೆ! ಆಕೆ ಸತ್ತು ಹೋದ ಮೇಲೆ ಆಕೆಯ ಬೆತ್ತಲೆ ದೇಹದ ಎದೆಯ ಮೇಲೆ ಕುಳಿತ ಈ ನರಹಂತಕ, ಚಾಕುವಿನಿಂದ ಇರಿಯುತ್ತಾ ವಿಕೃತ ಸುಖ ಕಂಡಿದ್ದಾನೆ. ಆ ತಣ್ಣಗಾದ ಶವದ ಪಕ್ಕದಲ್ಲೇ ಕುಳಿತು ರಕ್ತದ ವಾಸನೆಯ ನಡುವೆ ಬಿಯರ್ ಬಾಟಲಿ ಖಾಲಿ ಮಾಡಿದ್ದಾನೆ! ಇದಕ್ಕಿಂತ ಭೀಭತ್ಸವಾದ ದೃಶ್ಯ ನರಕದಲ್ಲೂ ಇರಲಿಕ್ಕಿಲ್ಲ. ಅಷ್ಟಕ್ಕೇ ನಿಲ್ಲದ ಈತನ ಸೈಕೋ ಹಸಿವು, ಆ ನಿರ್ಜೀವ ದೇಹದ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗುವಂತೆ ಮಾಡಿತ್ತು!

ಪನ್ವೆಲ್ ಕಾಡಿನಲ್ಲಿ ಮಾಟ-ಮಂತ್ರದ ‘ಡಾರ್ಕ್’ ಗೇಮ್!
ಕೊಲೆ ಮಾಡಿ ಮಹಾರಾಷ್ಟ್ರದ ಪನ್ವೆಲ್ ಕಾಡಿಗೆ ಪರಾರಿಯಾದ ಈತ, ಅಲ್ಲಿ ಯಾವ ಮಾಂತ್ರಿಕನಿಗೂ ಕಮ್ಮಿ ಇಲ್ಲದಂತೆ ವರ್ತಿಸಿದ್ದಾನೆ. ಅಗರಬತ್ತಿ ಹಚ್ಚಿ, ಒಂದು ನಿಗೂಢ ವರ್ತುಲದ ಮಧ್ಯೆ ಕುಳಿತು ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ನೋಡ್ತಿದ್ದಾನೆ. ಯಾಕೆ ಗೊತ್ತಾ? “ಕೊಂದ ಮೇಲೆ ಆತ್ಮವನ್ನ ಹೇಗೆ ವಶಪಡಿಸಿಕೊಳ್ಳಬೇಕು?” ಎಂಬ ಮಾಂತ್ರಿಕ ತಂತ್ರಕ್ಕಾಗಿ! ತಾನು ಕೊಂದ ಪ್ರೇಯಸಿಯ ಆತ್ಮವನ್ನು ಕರೆಸಿಕೊಂಡು, ಅವಳ ಹತ್ತಿರ ಕ್ಷಮೆ ಕೇಳಿ, ಅವಳನ್ನ ತನ್ನ ಹತೋಟಿಗೆ ತಗೆದುಕೊಳ್ಳೋಕೆ ಈತ ಮಾಡಿದ್ದ ಪ್ಲಾನ್ ಕೇಳಿದ್ರೆ ಅಕ್ಷರಶಃ ನಿಮ್ಮ ಮೈ ಬೆವರುತ್ತದೆ.
ಇತ್ತ ಈ ಜೋಡಿಯ ಅಶ್ಲೀಲ ವಿಡಿಯೋಗಳು ವಾಟ್ಸಪ್ ಸ್ಟೇಟಸ್‌ಗಳಲ್ಲಿ ಹರಿದಾಡುತ್ತಿದ್ದರೆ, ಅತ್ತ ಆ ಹಂತಕ ಆತ್ಮಗಳ ಜೊತೆ ಸಂವಾದ ನಡೆಸಲು ಅತೀಂದ್ರಿಯ ಲೋಕದ ಕದ ಬಡಿಯುತ್ತಿದ್ದ. ಇದು ಕೇವಲ ಕ್ರೈಂ ಅಗಿರಲ್ಲ… ಇದು ಮಾಟ-ಮಂತ್ರದ ಹಪಾಹಪಿ ಮತ್ತು ವಿಕೃತ ಕಾಮದ ಭೀಭತ್ಸ ಮಿಶ್ರಣ!
ಪ್ರೀತಿಯ ಹೆಸರಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾವಿನ ಮನೆಯ ಕದ ಬಡಿಯುತ್ತಿರುವ ಇಂದಿನ ಯುವತಿಯರಿಗೆ ಈ ಘಟನೆ ಒಂದು ಎದೆನಡುಗಿಸುವ ಎಚ್ಚರಿಕೆ. ನಿಮ್ಮ ಪಕ್ಕದಲ್ಲೇ ಇರುವವನು ಪ್ರೇಮಿಯೋ ಅಥವಾ ಇಂತಹ ಸೈಕೋ ಮಾಂತ್ರಿಕನೋ ಅಂತ ಒಮ್ಮೆ ಪರೀಕ್ಷಿಸಿಕೊಳ್ಳಿ!
