ಮಂಗಳೂರಿನಲ್ಲಿ ವಿದ್ವಾನ್ ಡಾ. ಪಾವಗಡ ಪ್ರಕಾಶರಾಯರ ಶ್ರೀಮದ್ಭಗವದ್ಗೀತಾ ಪ್ರವಚನ

ಸುರತ್ಕಲ್: ಶ್ರೀ ಶಾರದಾ ಸೇವಾ ಟ್ರಸ್ಟ್(ರಿ), ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಶ್ರೀ ಶಾರದಾ ಮಾತೃ ಮಂಡಳಿ ಸುರತ್ಕಲ್, ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಕರ್ಣಾಟಕ ಬ್ಯಾಂಕ್ ಲಿ., ಮಂಗಳೂರು, ಕಲ್ಕೂರ ಪ್ರತಿಷ್ಠಾನ(ರಿ) ಕೊಡಿಯಾಲ್ ಬೈಲ್, ಮಂಗಳೂರು, ಶ್ರೀಕೃಷ್ಣ ಗೀತಾ ಜ್ಞಾನ ಸಮಿತಿ ಕದ್ರಿ, ಸಾಹಿತ್ಯ ಕೇಂದ್ರ, ಮಂಗಳೂರು ಧರ್ಮದರ್ಶಿ ಹರಿಕೃಷ್ಣ ಪುನರೂರು, ಯಸ್.ಎಲ್. ಶೇಟ್ ಜುವೆಲ್ಲರ್ಸ್ ಮತ್ತು ಡೈಮಂಡ್ ಹೌಸ್, ಕೆ.ಎಸ್.ರಾವ್ ರಸ್ತೆ, ಮಂಗಳೂರು, ಬಲ್ಮಠ ಡಯಾಗೋಸ್ಟಿಕ್ & ರಿಸರ್ಚ್ ಸೆಂಟರ್, ಬಲ್ಮಠ ಸ್ಕ್ಯಾನ್ ಸೆಂಟರ್, ಮಂಗಳೂರು, ಶ್ರೀ ಭಾರಧ್ವಾಜ ಫೌಂಡೇಶನ್ ಮಂಗಳೂರು, ಇವರ ಸಹಯೋಗದಲ್ಲಿ “ಚಂದನ” ದೂರದರ್ಶನದ ‘ಸತ್ಯದರ್ಶನ’ ಖ್ಯಾತಿಯ ಡಾ. ಪಾವಗಡ ಪ್ರಕಾಶರಾಯರಿಂದ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲೆ 10 ಇದನ್ನು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಭಾಂಗಣ ಇಲ್ಲಿ ಫೆ.22 ರಿಂದ ಮಾ.3ರ ತನಕ 8 ದಿನಗಳ ಕಾಲ ಪ್ರತಿದಿನ ಸಂಜೆ ಗಂಟೆ 6.00 ರಿಂದ 7.30ರ ತನಕ ನಡೆಸಲು ನಿರ್ಧರಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ವೈ.ರಾಘವೇಂದ್ರ ರಾವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಫೆ.22 ಭಾನುವಾರ ಸಂಜೆ ಗಂಟೆ 5ಕ್ಕೆ ಉದ್ಘಾಟನಾ ಸಮಾರಂಭ ಜರಗಲಿದ್ದು ಇದರ ಅಧ್ಯಕ್ಷತೆಯನ್ನು ಪ್ರದೀಪ್ ಕುಮಾರ್ ಕಲ್ಕೂರ, ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇವರು ವಹಿಸಲಿದ್ದಾರೆ. ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ರಾಘವೇಂದ್ರ ಯಸ್. ಭಟ್, ಆಡಳಿತ ನಿರ್ದೇಶಕರು, ಕರ್ಣಾಟಕ ಬ್ಯಾಂಕ್ ಲಿ. ಮಂಗಳೂರು ಇವರು ನೆರವೇರಿಸಲಿದ್ದಾರೆ.

ಮುಖ್ಯ ಅಭ್ಯಾಗತರಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್, ಪ್ರಶಾಂತ್ ಶೇಟ್ ಮಾಲಕರು ಎಸ್.ಎಲ್. ಶೇಟ್ ಡೈಮಂಡ್ ಜ್ಯುವೆಲ್ಲರ್, ಕೆ.ಎಸ್. ರಾವ್ ರಸ್ತೆ, ಮಂಗಳೂರು, ಕೆ. ಶ್ರೀಪತಿ ಭಟ್, ಮಾಲಕರು, ಧನಲಕ್ಷ್ಮಿ ಕ್ಯಾಶ್ ಇಂಡಸ್ಟ್ರೀಸ್, ಮೂಡಬಿದಿರೆ ಹಾಗೂ ಸುಧಾಕರ ರಾವ್ ಪೇಜಾವರ, ಪಿ.ಆರ್.ಒ ಹಿಂದೂ ವಿದ್ಯಾದಾಯಿನೀ ಸಂಘ, ಸುರತ್ಕಲ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಮಾಹಿತಿ ನೀಡಿದರು.

ತಾ.23 ರಿಂದ 28ರ ತನಕ ಪ್ರತಿದಿನ ಸಂಜೆ ಗಂಟೆ 5.45ಕ್ಕೆ ಗಣ್ಯವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ, ದೀಪ ಬೆಳಗಿಸಿ ಶುಭ ಹಾರೈಸಲಿರುವರು. ಮಾ.1 ರಂದು ಸಮಾರೋಪ ಸಮಾರಂಭ ಜರಗಲಿದ್ದು, ರತ್ನಾಕರ ಕುಳಾಯಿ, ಸಾಹಿತ್ಯ ಕೇಂದ್ರ, ಮಂಗಳೂರು ಇವರು ಅಧ್ಯಕ್ಷತೆ ವಹಿಸಲಿದ್ದು ಸುಗುಣ ಎಂ. ರಾಘವೇಂದ್ರ ಭಟ್ ಹಾಗೂ ಯಂ. ಯಂ. ಪ್ರಭು ಇವರು ಮುಖ್ಯ ಅತಿಥಿಗಳಾಗಿರುತ್ತಾರೆ.

ಪ್ರತೀ ದಿನ ಸಂಜೆ ಗಂಟೆ 5 ರಿಂದ 6ರ ವರೆಗೆ ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವು ಇರುತ್ತದೆ. ಈ ಪ್ರವಚನ ಕಾರ್ಯಕ್ರಮವು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತದೆ.

ಪತ್ರಿಕಾಗೋಷ್ಟಿಯಲ್ಲಿ ಕೃಷ್ಣ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.

error: Content is protected !!