ದೈವ ದೇವರ ಆಶೀರ್ವಾದದಿಂದ ಕಾರ್ಯಸಿದ್ಧಿ – ‌ ಶ್ರೀ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ

ಸುರತ್ಕಲ್: ದೈವ ದೇವರುಗಳ ಆಶೀರ್ವಾದ ಒಂದಿದ್ದರೆ ನಾವು ಎಣಿಸಿದ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಓಂ ಶಕ್ತಿಪೀಠ ನಿಪ್ಪಾಣಿ ಮಹಾಕಾಳಿ ಮಹಾಸಂಸ್ಥಾನದ ಮಠಾಧಿಪತಿಗಳಾದ ಶ್ರೀ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ ಹೇಳಿದರು.

ಸಸಿ ಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಸಂಚಾಲಕತ್ವದಲ್ಲಿ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ನಡೆದ ಪುನರ್ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಚಿವ ನಾಗರಾಜ ಬಿ. ಶೆಟ್ಟಿ ಅವರು, ಗರೋಡಿ ಕ್ಷೇತ್ರವು ಭಕ್ತರ ಸರ್ವರ ಸಹಕಾರದಿಂದ ದೈವಗಳ ನೆಲೆಯಾಗಿ ಪುನರ್‌ನವೀಕರಣಗೊಂಡಿದ್ದು, ಶಕ್ತಿಗಳ ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ರಂಗನಾಥ ಭಟ್ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಬಿಲ್ಲವರ ಮಹಾಮಂಡಲದ ಅಧ್ಯಕ್ಷರು ಹಾಗೂ ಭಾರತ್ ಬ್ಯಾಂಕ್ ಮುಖ್ಯಸ್ಥರಾದ ಸೂರ್ಯಕಾಂತ್ ಜೆ. ಸುವರ್ಣ, ಉದ್ಯಮಿಗಳಾದ ಪದ್ಮನಾಭ ಬಂಗೇರ, ದನಂಜಯ ಶೆಟ್ಟಿ, ಭಾಸ್ಕರ ಸಾಲಿಯಾನ್ (ಮುಂಬೈ), ಸದಾಶಿವ ಸಾಲಿಯಾನ್ (ಪುಣೆ), ಗಣೇಶ ಪೂಜಾರಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್‌ನ ಮೋಹನ್ ಕೋಟ್ಯಾನ್, ಯತೀಶ್ ಬೈಕಂಪಾಡಿ, ದಿನೇಶ್, ಭಾಸ್ಕರ ಕೋಟ್ಯಾನ್, ಗಂಗಾಧರ ಜೆ. ಪೂಜಾರಿ, ಶ್ವೇತಾ ಸಂತೋಷ್ ಕೋಟ್ಯಾನ್, ಗೋಪಾಲ ಸುವರ್ಣ, ಕಾಂತು ಲಕ್ಕಣ್ಣ ಗಡಿ ಪ್ರಧಾನ (ಪಟೇಲ ಮನೆತನ)ದ ಪ್ರತಿನಿಧಿ ಲೀಲಾಧರ ಬಂಗೇರ, ಲೀಲಾಕ್ಷ ಕರ್ಕೇರ, ಆಡಳಿತ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಸಿಬಿ ಕೋಟ್ಯಾನ್, ಜಗನ್ನಾಥ ಕೋಟ್ಯಾನ್, ಅನಿಲ್ ಪೂಜಾರಿ, ಮಹಿಳಾ ವಿಭಾಗದ ಪ್ರಮುಖರು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಬೈ ಸಮಿತಿಯ ಸತೀಶ್ ಕೋಟ್ಯಾನ್ ಅವರು ಸ್ವಾಗತಿಸಿದರು. ನವೀನ್ ಶೆಟ್ಟಿ ಹೆಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ಈ ಸಂದರ್ಭ ಗೌರವಿಸಲಾಯಿತು.

ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಹಾಸ್ಯ ಸಂಭ್ರಮ, ಹಾಗೂ ಊರ್ವ ಸಾಯಿ ಶಕ್ತಿ ಕಲಾಬಳಗದವರಿಂದ “ಜೋಡು ದೀಟಿಕೆ” ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

error: Content is protected !!