ಸಸಿಹಿತ್ಲು ಬಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಎರಡು ಲಕ್ಷ ರೂ. ಅನುದಾನ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಸಸಿಹಿತ್ಲು ಬಬ್ಬರ್ಯ ದೈವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನುದಾನ ರೂ. 200,000 ಬಿಡುಗಡೆಯಾಗಿದ್ದು, ಅದರ ಚೆಕ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಜಪೆ ತಾಲೂಕು ಯೋಜನಾಧಿಕಾರಿ ಗಿರೀಶ್ ಕುಮಾರ್ ಸಮಿತಿಗೆ ಹಸ್ತಾಂತರ ಮಾಡಿದರು.

ವೇದಿಕೆಯಲ್ಲಿ ಅರಸು ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರು ಶ್ರೀ ಗೌತಮ್ ಜೈನ್, ಮುಲ್ಕಿ ಜನಜಾಗ್ರತಿ ವೇದಿಕೆ ಅಧ್ಯಕ್ಷರು ಶ್ರೀ ವಿನೋದ್ ಬೆಳ್ಳಾಯರು, ಮೂಲ್ಕಿ ವಲಯ ಒಕ್ಕೂಟ ಅಧ್ಯಕ್ಷರು ಶ್ರೀ ಪುಷ್ಪರಾಜ್ ಶೆಟ್ಟಿ ಮಧ್ಯ, ಮೂಲ್ಕಿ ವಲಯ ಮೇಲ್ವಿಚಾರಕರು ನಿಶ್ಮಿತಾ ಶೆಟ್ಟಿ, ಹಳೆಯಂಗಡಿ ಗ್ರಾಮಪಂಚಾಯಿತ್ ಅಧ್ಯಕ್ಷರು ಶ್ರೀಮತಿ ಪೂರ್ಣಿಮಾ, ಉಪಾಧ್ಯಕ್ಷೆ ಚಂದ್ರಿಕಾ, ಸಸಿಹಿತ್ಲು ಗ್ರಾಮಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷರು ಶ್ರೀಮತಿ ಶೈಲಜಾ,ಶ್ರೀಮತಿ ರೇವತಿ ಮೊಗವೀರ ಸಮಾಜದ ಅಧ್ಯಕ್ಷರು ಗಿರೀಶ್ ಶ್ರೀಯನ್, ಮೊಗವೀರ ಮಹಿಳಾ ಸಮಾಜ ಅಧ್ಯಕ್ಷೆ ಶ್ರೀಮತಿ ಸವಿತಾ. ಶಕ್ತಿ ಕೇಂದ್ರ ಪ್ರಮುಖ್ ಅನಿಲ್ ,ಕಿಶೋರ್ ಗುರಿಕಾರ, ಪ್ರಭಾಕರ್ ಪೂಜಾರಿ, ಮೊಗವೀರ ಸಮಾಜದ ಸದಸ್ಯರಾದ ಸೂರಜ್, ಹರೀಶ್ ಬಂಗೇರ, ಶಂಕರ ತಿಂಗಳಾಯ ನವೀನ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!