ಎಫ್‌ಸ್ಟೀನ್ ಫೈಲ್ಸ್ ಬೆನ್ನೇರಿ ಬಂದಿದ್ದವನಿಗೆ ಕಾದಿತ್ತು ಮೃತ್ಯು!

ಹಣ ಮತ್ತು ಅಧಿಕಾರ ಮಿತಿ ಮೀರಿದಾಗ ಮನುಷ್ಯ ಸೈತಾನನಾಗುತ್ತಾನೆ ಅಂತಾರಲ್ಲ, ಅದು ಎಷ್ಟು ನಿಜ ಅನ್ನೋದಕ್ಕೆ ಹಾಲಿವುಡ್‌ನ ಆ ಮಹಾನ್ ಮಾಂತ್ರಿಕ ಸ್ಟಾನ್ಲಿ ಕುಬ್ರಿಕ್ ಸಾಕ್ಷಿ. ಕುಬ್ರಿಕ್ ಬರೀ ಸಿನಿಮಾ ನಿರ್ದೇಶಕನಾಗಿರಲಿಲ್ಲ, ಆತ ಕಾಲಕ್ಕಿಂತ ಮೈಲಿಗಳಷ್ಟು ಮುಂದಿದ್ದ ಒಬ್ಬ ಆಧುನಿಕ ನಾಸ್ಟ್ರಾಡಾಮಸ್! 1999ರಲ್ಲಿ ಆತ ‘ಐಸ್ ವೈಡ್ ಶಟ್’ (Eyes Wide Shut) ಅನ್ನೋ ಸಿನಿಮಾ ಮಾಡದಿದ್ದರೆ, ಬಹುಶಃ ಇವತ್ತು ನಮಗೆ ಆ ಕತ್ತಲ ಲೋಕದ ದರ್ಶನವಾಗುತ್ತಿರಲಿಲ್ಲವೇನೋ…

Stanley Kubrick

ಆದರೆ, ಆ ಸತ್ಯವನ್ನು ಹೇಳಹೊರಟ ಕುಬ್ರಿಕ್‌ಗೆ ವಿಧಿ ಕೊಟ್ಟ ಶಿಕ್ಷೆ ಮಾತ್ರ ಅತ್ಯಂತ ಭಯಾನಕ!

ಕುಬ್ರಿಕ್ ಸಾವಿನ ಹಿಂದಿನ ಆ ಕರಾಳ ಸಸ್ಪೆನ್ಸ್!
ಟಾಮ್ ಕ್ರೂಸ್ ಮತ್ತು ನಿಕೋಲ್ ಕಿಡ್‌ಮನ್ ನಟಿಸಿದ ಆ ಸಿನಿಮಾದಲ್ಲಿ ಕುಬ್ರಿಕ್ ತೋರಿಸಿದ್ದು ಏನನ್ನು ಗೊತ್ತಾ? ಜಗತ್ತಿನ ಅತಿ ಪ್ರಭಾವಿ ವ್ಯಕ್ತಿಗಳು ಮಾಸ್ಕ್ ಧರಿಸಿ ನಡೆಸುವ ಆ ಅಶ್ಲೀಲ ಲೈಂಗಿಕ ಪಾರ್ಟಿಗಳು, ರಹಸ್ಯ ಕೂಟಗಳು ಮತ್ತು ಶಕ್ತಿಯ ದುರುಪಯೋಗ. ಸಿನಿಮಾ ಪೂರ್ಣಗೊಂಡು, ಅದರ ಫೈನಲ್ ಕಟ್ ಅನ್ನು ತನ್ನ ಆಪ್ತರಿಗೆ ತೋರಿಸಿದ ಕೇವಲ ಆರೇ ದಿನಗಳಲ್ಲಿ ಕುಬ್ರಿಕ್ ಹೆಣವಾಗಿ ಬಿದ್ದಿದ್ದರು!

advertisement

70 ವರ್ಷದ ಕುಬ್ರಿಕ್ ನಿದ್ರೆಯಲ್ಲೇ ಹಾರ್ಟ್ ಅಟ್ಯಾಕ್‌ನಿಂದ ಸತ್ತರು ಅಂತ ಘೋಷಿಸಲಾಯಿತು. ಆದರೆ, ಅವರ ಅಂತ್ಯಕ್ರಿಯೆ ನಡೆದಿದ್ದು ಮಾತ್ರ ಅತ್ಯಂತ ನಿಗೂಢವಾಗಿ. ಕೇವಲ 100 ಜನರಿಗೆ ಮಾತ್ರ ಅವಕಾಶ, ಮಾಧ್ಯಮದವರು ಮೈಲುಗಳಷ್ಟು ದೂರ! ಕುಬ್ರಿಕ್ ತನ್ನ ಸಿನಿಮಾದ ಮೂಲಕ ಯಾರ ಗುಟ್ಟನ್ನ ರಟ್ಟು ಮಾಡಬಾರದಿತ್ತೋ, ಅವರೇ ಕುಬ್ರಿಕ್ ಉಸಿರು ನಿಲ್ಲಿಸಿದರಾ? ಈ ಪ್ರಶ್ನೆ ಇಂದಿಗೂ ಹಾಲಿವುಡ್ ವಠಾರದಲ್ಲಿ ಗಾಳಿಯಂತೆ ಓಡಾಡುತ್ತಿದೆ.

ಎಫ್‌ಸ್ಟೀನ್ ಎಂಬ ಫೀನಿಕ್ಸ್ ಮತ್ತು ಟ್ರಂಪ್ ಆತಂಕ!
ವರ್ಷಗಳು ಕಳೆದವು… ಈಗ ಜೆಫ್ರಿ ಎಫ್‌ಸ್ಟೀನ್ ಎಂಬ ಸೈತಾನನ ಹಳೆಯ ಫೈಲ್‌ಗಳು ಚಿತಾಭಸ್ಮದಿಂದ ಎದ್ದು ಬಂದ ಫೀನಿಕ್ಸ್ ಹಕ್ಕಿಯಂತೆ ಹಾರಾಡುತ್ತಿವೆ. ಫ್ಲೋರಿಡಾದ ಸಮಾಧಿಯಲ್ಲಿ ಹೂತು ಹೋಗಿದ್ದ ರಹಸ್ಯಗಳು ಹೊರಬರುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಅವರ ಮುಖದಲ್ಲಿ ಆತಂಕದ ಗೆರೆಗಳು ಮೂಡಿವೆ. ಡೆಮೋಕ್ರಾಟ್‌ಗಳ ಕೈಗೆ ಹೊಸ ಆಯುಧ ಸಿಕ್ಕಿದೆ, ಟ್ಯಾಬ್ಲಾಯ್ಡ್‌ಗಳಿಗೆ ಬೇಕಾದ ಮಸಾಲೆ ಸಿಕ್ಕಿದೆ.

ಆದರೆ, ಇಲ್ಲೊಂದು ಟ್ವಿಸ್ಟ್ ಇದೆ! ಈ ಬೆಂಕಿ ಅಧ್ಯಕ್ಷರನ್ನೇ ದಹಿಸಿಬಿಡಬಹುದು ಅಂದುಕೊಳ್ಳುವಷ್ಟರಲ್ಲಿ, ಟ್ರಂಪ್ ಅವರ ಅಚಲ ನಿಷ್ಠಾವಂತೆ ಪ್ಯಾಮ್ ಬೋಂಡಿ ಜನವರಿ 30ರಂದು ಆ ಜ್ವಾಲೆಗಳನ್ನು ನಂದಿಸುವಲ್ಲಿ ಯಶಸ್ವಿಯಾದರು. ಕನಿಷ್ಠ 2028ರವರೆಗಾದರೂ ಟ್ರಂಪ್‌ಗೆ ಈ ಫೈಲ್‌ಗಳ ಕಾಟ ಇರಲಾರದು ಅಂತ ಕಾಣುತ್ತಿದೆ.

advertisement

30 ದಿನಗಳ ಆ ‘ಡೆಡ್‌ಲೈನ್’!
ನವೆಂಬರ್ 18, 2025ರಂದು ಹೊರಬಂದ ʻಎಫ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪರೆನ್ಸಿ’ ಕಾಯ್ದೆ ಈಗ ಅಮೆರಿಕದ ಅಟಾರ್ನಿ ಜನರಲ್ ಕತ್ತಿಗೆ ಉರುಳಾಗಿದೆ. ಎಫ್‌ಬಿಐ (FBI) ಮತ್ತು ನ್ಯಾಯಾಂಗ ಇಲಾಖೆಯ (DOJ) ಕಪಾಟಿನಲ್ಲಿ ಧೂಳು ಹಿಡಿಯುತ್ತಿದ್ದ ಎಫ್‌ಸ್ಟೀನ್‌ಗೆ ಸಂಬಂಧಿಸಿದ ಎಲ್ಲಾ ಕಪ್ಪು ದಾಖಲೆಗಳನ್ನು 30 ದಿನಗಳ ಒಳಗೆ ಸಾರ್ವಜನಿಕ ಮಾಡಬೇಕು ಅನ್ನೋದು ಆದೇಶ.

ಅಲ್ಲಿಗೆ, ಸ್ಟಾನ್ಲಿ ಕುಬ್ರಿಕ್ ತನ್ನ ಸಿನಿಮಾದಲ್ಲಿ ಯಾವುದನ್ನು ಸೂಚ್ಯವಾಗಿ ಹೇಳಿದ್ದನೋ, ಆ ಕರಾಳ ಮುಖಗಳು ಈಗ ಅಧಿಕೃತವಾಗಿ ಬಯಲಾಗುವ ಕಾಲ ಹತ್ತಿರ ಬಂದಿದೆ. ಆ ದಾಖಲೆಗಳಲ್ಲಿ ಯಾರ್ಯಾರ ಬೆತ್ತಲೆ ಮುಖಗಳಿವೆಯೋ? ಯಾವೆಲ್ಲಾ ಗಣ್ಯರ ಪಗಡೆ ಆಟ ಬಯಲಾಗುತ್ತೋ? ಕಾದು ನೋಡಿ… ಇದು ಬರೀ ಸಿನಿಮಾವಲ್ಲ, ಇದು ರಕ್ತ ಮತ್ತು ಕಾಮದ ಇತಿಹಾಸ!

advertisement

ಸತ್ಯ ಯಾವತ್ತೂ ಹೂತು ಹೋಗಲ್ಲ. ಕುಬ್ರಿಕ್‌ನನ್ನು ಮೌನವಾಗಿಸಬಹುದು, ಆದರೆ ಕಾಲ ಉರುಳಿದಂತೆ ಎಫ್‌ಸ್ಟೀನ್‌ನಂತಹ ಕಿರಾತಕರ ಫೈಲ್‌ಗಳು ತಾವಾಗಿಯೇ ಬಾಯಿ ಬಿಡುತ್ತವೆ. ಈಗ ಅಮೆರಿಕದ ಕತ್ತಲಕೋಣೆಯಲ್ಲಿರುವ ಆ ಪೇಪರ್‌ಗಳು ಹೊರಬಂದರೆ, ಜಗತ್ತಿನ ಹತ್ತಾರು ‘ದೊಡ್ಡ ಮನುಷ್ಯರ’ ಮುಖವಾಡ ಕಳಚಿ ಬೀಳೋದಂತೂ ಗ್ಯಾರಂಟಿ!

error: Content is protected !!