ಲೊಲಿಟಾ ಎಕ್ಸ್‌ಪ್ರೆಸ್ ಮತ್ತು ಕಾಮದ ದ್ವೀಪದ ಅಸಲಿ ಮುಖ!
ಈ ಜೆಫ್ರಿ ಎಫ್‌ಸ್ಟೀನ್ ಕೇವಲ ಒಬ್ಬ ಕ್ರಿಮಿನಲ್ ಆಗಿರಲಿಲ್ಲ. ಆತ ಸಮಾಜದ ಉನ್ನತ ವರ್ಗದವರಿಗೆ ಬೇಕಾದ ‘ಗಲೀಜು’ ಕೆಲಸಗಳನ್ನು ಮಾಡಿಕೊಡುವ ಒಬ್ಬ ಇಂಟರ್ನ್ಯಾಷನಲ್ ದಲ್ಲಾಳಿಯಾಗಿದ್ದ. ಆತನ ಸಾಮ್ರಾಜ್ಯ ಎಷ್ಟು ದೊಡ್ಡದಿತ್ತು ಅನ್ನೋದಕ್ಕೆ ಆತ ಬಳಸುತ್ತಿದ್ದ ʻಲೊಲಿಟಾ ಎಕ್ಸ್‌ಪ್ರೆಸ್’ (Lolita Express) ಅನ್ನೋ ಖಾಸಗಿ ವಿಮಾನವೇ ಸಾಕ್ಷಿ.

ಈ ವಿಮಾನದಲ್ಲಿ ಯಾರ್ಯಾರು ಹೋಗುತ್ತಿದ್ದರು? ಎಲ್ಲಿಗೆ ಹೋಗುತ್ತಿದ್ದರು? ಅಲ್ಲಿ ಏನು ನಡೆಯುತ್ತಿತ್ತು? ಈ ಪ್ರಶ್ನೆಗಳಲ್ಲೇ ಅಸಲಿ ಗುಟ್ಟು ಅಡಗಿದೆ.
ಆ ‘ದ್ವೀಪ’ದ ರಹಸ್ಯ: ಕೆರಿಬಿಯನ್ ಸಮುದ್ರದ ನಡುವೆ ಇರುವ ‘ಲಿಟಲ್ ಸೇಂಟ್ ಜೇಮ್ಸ್’ ಅನ್ನೋ ದ್ವೀಪ ಈತನ ಅಡ್ಡೆಯಾಗಿತ್ತು. ಈ ದ್ವೀಪದಲ್ಲಿ ಎಫ್‌ಸ್ಟೀನ್ ಒಂದು ದೊಡ್ಡ ಬಂಗಲೆ ಕಟ್ಟಿಸಿದ್ದ. ಅಲ್ಲಿ ಹೈಟೆಕ್ ಸಿಸಿ ಕ್ಯಾಮೆರಾಗಳು ಪ್ರತಿಯೊಂದು ಮೂಲೆಯಲ್ಲೂ ಇದ್ದವು. ಯಾಕೆ ಗೊತ್ತಾ? ಅಲ್ಲಿಗೆ ಬರುವ ದೊಡ್ಡ ದೊಡ್ಡ ಗಣ್ಯರ ಹನಿಮೂನ್ ವೀಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳಲು! ಆ ವೀಡಿಯೋಗಳನ್ನು ಇಟ್ಟುಕೊಂಡು ಆತ ಪ್ರಭಾವಿ ವ್ಯಕ್ತಿಗಳನ್ನು ʻಬ್ಲ್ಯಾಕ್ ಮೇಲ್’ ಮಾಡುತ್ತಿದ್ದ ಅನ್ನೋದು ಈ ಫೈಲ್‌ಗಳಿಂದ ಬಯಲಾಗುತ್ತಿರುವ ಆಘಾತಕಾರಿ ಸತ್ಯ.

ಬ್ಲ್ಯಾಕ್‌ಮೇಲಿಂಗ್ ಜಾಲ: ಎಫ್‌ಸ್ಟೀನ್ ಸುಮ್ಮನೆ ಪಾರ್ಟಿ ಕೊಡುತ್ತಿರಲಿಲ್ಲ. ಬ್ರಿಟನ್ ರಾಜಕುಮಾರನಿಂದ ಹಿಡಿದು ಅಮೆರಿಕದ ಅಧ್ಯಕ್ಷರವರೆಗೆ ಎಲ್ಲರಿಗೂ ಹುಡುಗಿಯರನ್ನು ಸಪ್ಲೈ ಮಾಡಿ, ಅವರ ಕಾಮದ ಚಟಗಳನ್ನು ಬಳಸಿಕೊಂಡು ತನ್ನ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದ. ಆತನಿಗೆ ಇಸ್ರೇಲ್‌ನ ಗೂಢಚಾರಿ ಸಂಸ್ಥೆ ʻಮೊಸಾದ್’ ಜೊತೆಗೂ ಲಿಂಕ್ ಇತ್ತು ಅನ್ನೋ ಮಾತುಗಳಿವೆ. ಈ ಮೂಲಕ ಜಗತ್ತಿನ ರಾಜಕಾರಣವನ್ನೇ ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳೋದು ಈತನ ಪ್ಲಾನ್ ಆಗಿತ್ತು.
ಗಿಸ್ಲೇನ್ ಮ್ಯಾಕ್ಸ್‌ವೆಲ್—ಬಲಗೈ ಬಂಟಿ: ಈ ಕರಾಳ ದಂಧೆಯಲ್ಲಿ ಎಫ್‌ಸ್ಟೀನ್ ಒಬ್ಬನೇ ಇರಲಿಲ್ಲ. ಆತನ ಗರ್ಲ್‌ಫ್ರೆಂಡ್ ಗಿಸ್ಲೇನ್ ಮ್ಯಾಕ್ಸ್‌ವೆಲ್ ಈ ಇಡೀ ಜಾಲದ ಮಾಸ್ಟರ್ ಮೈಂಡ್. ಬಡ ಹುಡುಗಿಯರಿಗೆ “ಮಾಡಲಿಂಗ್ ಚಾನ್ಸ್ ಕೊಡಿಸ್ತೀನಿ”, “ಶಿಕ್ಷಣ ಕೊಡಿಸ್ತೀನಿ” ಅಂತ ಮರುಳು ಮಾಡಿ ಎಫ್‌ಸ್ಟೀನ್ ಪಂಜರಕ್ಕೆ ತಳ್ಳುತ್ತಿದ್ದವಳೇ ಈಕೆ. ಇವತ್ತಿಗೂ ಈಕೆ ಜೈಲಿನಲ್ಲಿದ್ದಾಳೆ, ಆದರೆ ಈಕೆಯ ಬಾಯಿ ಮುಚ್ಚಿಸಲು ತೆರೆಮರೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆಯುತ್ತಿದೆ.

ಸ್ಟೀಫನ್ ಹಾಕಿಂಗ್ ಹೆಸರೇಕೆ ಬಂತು?: ಜಗತ್ತು ಪೂಜಿಸುವ ವಿಜ್ಞಾನಿ ಹಾಕಿಂಗ್ ಹೆಸರು ಈ ಫೈಲ್‌ನಲ್ಲಿ ಬಂದಾಗ ಎಲ್ಲರೂ ದಂಗಾದರು. ಆದರೆ ಫೈಲ್ ಪ್ರಕಾರ, ಎಫ್‌ಸ್ಟೀನ್ ತನ್ನ ದ್ವೀಪದಲ್ಲಿ ಒಂದು ವಿಜ್ಞಾನಿಗಳ ಸಮ್ಮೇಳನ ಏರ್ಪಡಿಸಿದ್ದ. ಅಲ್ಲಿಗೆ ಹಾಕಿಂಗ್ ಹೋಗಿದ್ದು ನಿಜ. ಆದರೆ ಅವರು ಅಲ್ಲಿನ ಲೈಂಗಿಕ ದಂಧೆಯಲ್ಲಿ ಭಾಗಿಯಾಗಿದ್ದರಾ ಅಥವಾ ಕೇವಲ ಅತಿಥಿಯಾಗಿ ಹೋಗಿದ್ದರಾ ಅನ್ನೋದು ಇಂದಿಗೂ ನಿಗೂಢ. ಆದರೆ ಎಫ್‌ಸ್ಟೀನ್ ತನ್ನ ಇಮೇಜ್ ಬೆಳೆಸಿಕೊಳ್ಳಲು ಇಂತಹ ‘ಬುದ್ಧಿವಂತ’ರನ್ನು ಬಳಸಿಕೊಳ್ಳುತ್ತಿದ್ದ ಅನ್ನೋದು ಸುಳ್ಳಲ್ಲ.
ಎಫ್‌ಸ್ಟೀನ್ ಸಾವು—ಆತ್ಮಹತ್ಯೆಯೋ? ಕೊಲೆಯೋ?: 2019ರಲ್ಲಿ ಎಫ್‌ಸ್ಟೀನ್ ಬಾಯಿ ಬಿಡಲು ರೆಡಿಯಾಗಿದ್ದ. ಒಂದು ವೇಳೆ ಆತ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದರೆ ಇಡೀ ಅಮೆರಿಕದ ಅರ್ಧದಷ್ಟು ಕ್ಯಾಬಿನೆಟ್ ಮಂತ್ರಿಗಳು ಮತ್ತು ಬ್ರಿಟನ್ ರಾಜಮನೆತನದವರು ಜೈಲು ಪಾಲಾಗುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಹೈ ಸೆಕ್ಯೂರಿಟಿ ಇರುವ ಜೈಲಿನ ಸೆಲ್‌ನಲ್ಲಿ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ. ಆ ದಿನ ಅಲ್ಲಿನ ಸಿಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿರಲಿಲ್ಲ! ಇದೆಂತಹ ಕಾಕತಾಳೀಯ? ಇದನ್ನು ಆತ್ಮಹತ್ಯೆ ಅಂತ ನೀವು ನಂಬುತ್ತೀರಾ?

ಈಗ ಹೊರಬರುತ್ತಿರುವ ʻಎಫ್‌ಸ್ಟೀನ್ ಫೈಲ್’ ಅಂದರೆ ಅದು ಬರೀ ಪೇಪರ್‌ಗಳಲ್ಲ, ಅವು ನೂರಾರು ಬಾಲಕಿಯರ ಕಿರುಚಾಟದ ದಾಖಲೆಗಳು. ಅಧಿಕಾರ ಅನ್ನೋದು ಮನುಷ್ಯನನ್ನ ಹೇಗೆ ಸೈತಾನನನ್ನಾಗಿ ಮಾಡುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಹಣವಿದ್ದರೆ ಯಾವುದನ್ನೂ ಬೇಕಾದರೂ ಮುಚ್ಚಿ ಹಾಕಬಹುದು ಅನ್ನೋ ಗಣ್ಯರ ಸೊಕ್ಕಿಗೆ ಈಗ ಸುಪ್ರೀಂ ಕೋರ್ಟ್ ಕೊಳ್ಳಿ ಇಟ್ಟಿದೆ.
