ಫೆ.6: ಅ-19 ವಿಶ್ವಕಪ್‌ ಫೈನಲ್‌ ಪಂದ್ಯಾಟದಲ್ಲಿ ಭಾರತ – ಇಂಗ್ಲೆಂಡ್‌ ಮುಖಾಮುಖಿ

ಹರಾರೆ: ಅಂಡರ್‌-19 ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ ಪಂದ್ಯಾಟವು ಇಂದು(ಫೆ.6) ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ.

ಇಲ್ಲಿ ಭಾರತ ಗೆದ್ದರೆ 6ನೇ ಟ್ರೋಫಿಯ ಸಂಭ್ರಮಾಚರಿಸಲಿದೆ ಹಾಗೆಯೇ ಇಂಗ್ಲೆಂಡ್‌ ಗೆದ್ದರೆ, 2ನೇ ಬಾರಿ ಚಾಂಪಿಯನ್ಸ್‌ ಪಟ್ಟಕ್ಕೇರಿದ ಖುಷಿಗೆ ಪಾತ್ರವಾಗಲಿದೆ.

ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಅಂಡರ್‌ 19 ತಂಡ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ನಿಂದ ಗೆದ್ದಿತು. ಈ ವೇಳೆ ಆಯುಷ್‌ ಮ್ಹಾತ್ರೆ ಪಡೆ 311 ರನ್‌ ಗುರಿ ಬೆನ್ನತ್ತಿದ್ದರಿಂದ ಅ 19 ಏಕದಿನ ವಿಶ್ವಕಪ್‌ ಇತಿಹಾಸದಲ್ಲೇ ಗರಿಷ್ಠ ಚೇಸಿಂಗ್‌ ದಾಖಲೆ ನಿರ್ಮಾಣವಾಗಿತ್ತು. ಅದಕ್ಕೂ ಮುನ್ನ ಮಂಗಳವಾರದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು 27 ರನ್‌ನಿಂದ ಮಣಿಸಿದ್ದ ಇಂಗ್ಲೆಂಡ್‌ ಫೈನಲ್‌ಗೆ ಟಿಕೆಟ್‌ ಪಡೆದುಕೊಂಡಿತ್ತು.

error: Content is protected !!