ಭಾರತದ ವಿರುದ್ಧ ನಾವು ಆಡುವುದಿಲ್ಲ; ಪಾಕ್ ಪ್ರಧಾನಿ

T20 World Cup 2026: ಟಿ20 ವಿಶ್ವಕಪ್ ಭಾನುವಾರ(ಫೆ.7) ಶುರುವಾಗಲಿದ್ದು, 20 ತಂಡಗಳ ನಡುವಣ ಈ ಕದನದಲ್ಲಿ ಭಾರತ ಮತ್ತು ಪಾಕಿಸ್ತಾನ್ ಒಂದೇ ಗ್ರೂಪ್​ನಲ್ಲಿದೆ. ಆದರೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಪ್ರಧಾನಿಯೇ ಘೋಷಿಸಿದ್ದಾರೆ.

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ್ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಫೆಬ್ರವರಿ 15 ರಂದು ಇಂಡೊ–ಪಾಕ್ ನಡುವಣ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ.

ಟಿ20 ವಿಶ್ವಕಪ್ ಬಗ್ಗೆ ನಾವು ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡಿದ್ದೇವೆ. ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ. ಏಕೆಂದರೆ ಇದು ಕ್ರೀಡಾ ಕ್ಷೇತ್ರ, ರಾಜಕೀಯವಲ್ಲ. ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಬಹಳ ಪರಿಗಣಿತ ನಿಲುವನ್ನು ತೆಗೆದುಕೊಂಡಿದ್ದೇವೆ. ಅಲ್ಲದೆ ನಾವು ಬಾಂಗ್ಲಾದೇಶದ ಪರವಾಗಿ ನಿಲ್ಲಬೇಕು. ಇದು ತುಂಬಾ ಸೂಕ್ತವಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ಬುಧವಾರ ಪಾಕಿಸ್ತಾನದಲ್ಲಿ ನಡೆದ ಸಂಪುಟ ಸಭೆಯಲ್ಲಿ ಶೆಹಬಾಝ್ ಹೇಳಿದ್ದಾರೆ.

error: Content is protected !!