
ಮಂಗಳೂರು: ಮಂಗಳೂರು ಸೆಂಟ್ರಲ್ – ಡಾ. ಎಂಜಿಆರ್‌ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್ ಫಾಸ್ಟ್ ಎಕ್ಸ್ ಪ್ರಸ್ ರೈಲಿನ (ನಂ. 22637/22638) ಬೋಗಿಗಳನ್ನು ಸಾಂಪ್ರದಾಯಿಕವಾದ ಐಸಿಎಫ್ ದರ್ಜೆಯಿಂದ ಆಧುನಿಕ ಎಲ್.ಎಚ್.ಬಿ ದರ್ಜೆಗೇರಿಸಲಾಗಿದೆ.

ಇದರಿಂದಾಗಿ ಸುರಕ್ಷತೆ ಹೆಚ್ಚಾಗಲಿದ್ದು, ಆರಾಮದಾಯಕವಾದ ಪ್ರಯಾಣ ಸಾಧ್ಯವಾಗಲಿದೆ. ಸೀಟುಗಳ ಸಂಖ್ಯೆಯೂ ಹೆಚ್ಚಾಗಲಿದೆ. ಇದು ಫೆ.1ರಿಂದಲೇ ಅನ್ವಯವಾಗಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.
