
ಉಡುಪಿ: ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್(25) ಎಂಬವರ ಮೇಲೆ ತಲವಾರು ದಾಳಿ ನಡೆಸಿದ ತಂಡ ಕೊಲೆಗೆ ಯತ್ನಿಸಿರುವ ಘಟನೆ ಜ.30ರಂದು ರಾತ್ರಿ ನಗರದ ಪಿಪಿಸಿ ಕ್ರಾಸ್ ಬಳಿ ನಡೆದಿದ್ದು ಗಾಯಗೊಂಡ ಶರತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶರತ್ ತನ್ನ ಸ್ನೇಹಿತರಾದ ಅಕ್ಷತ್ ಪೈ, ಶಶಾಂಕ್, ರಮಾನಂದ ಪೈ ಎಂಬವರ ಜೊತೆಗಿದ್ದ ವೇಳೆ ಶರತ್ ಕುಂದರ್ ಕೈಗೆ ರಮಾನಂದ ಪೈಯ ಕೈ ತಾಗಿದ್ದು ಈ ವೇಳೆ ಮಾತಿನ ಚಕಮಕಿ ನಡೆದಿದೆ.
ನಂತರ ಶರತ್ ಕುಂದರ್ ಮನೆಗೆ ಹೊರಡುವಾಗ ಅಕ್ಷತ್ ಪೈ ಮತ್ತೆ ಕರೆ ಮಾಡಿ ಪಿಪಿಸಿ ಕ್ರಾಸ್ ಬಳಿ ಬರುವಂತೆ ತಿಳಿಸಿದ್ದು ಅದರಂತೆ ಶರತ್ ಕುಂದರ್, ಧ್ರುವ, ಸಿಲಾನ್ ಗಗನ್, ರೋಹಿತ್ ಪಿಪಿಸಿ ರಸ್ತೆಯ ಕೋಸ್ಟಲ್ ಚಿಕನ್ ಅಂಗಡಿಯ ಎದರು ನಿಂತಿದ್ದರು. ಆಗ ಅಲ್ಲಿಗೆ ವಾಹನಗಳಲ್ಲಿ ತಲವಾರು, ರಾಡ್ ಹಿಡಿದುಕೊಂಡು ರಮಾನಂದ ಪೈ, ಅಕ್ಷತ್ ಪೈ, ಶಶಾಂಕ ಹಾಗೂ ಇತರ 6-7 ಮಂದಿ ಬಂದಿದ್ದಾರೆ. ರಮಾನಂದ ಪೈ ತಲವಾರಿನಿಂದ ಬೀಸಿದಾಗ ಶರತ್ ಕೈಗೆ ತಾಗಿ ಗಾಯವಾಗಿದೆ. ಈ ವೇಳೆ ಶರತ್ ಸ್ನೇಹಿತರು ಬೊಬ್ಬೆ ಹಾಕಿದ್ದು ಆರೋಪಿಗಳು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.